ಮಲ್ಯ ಗಡಿಪಾರು ಪ್ರಕರಣ: ಇನ್ನೂ ಭರವಸೆ ನೀಡದ ಬ್ರಿಟನ್

ಹೊಸದಿಲ್ಲಿ,ಫೆ.21: ಬ್ಯಾಂಕುಗಳಿಗೆ ಸಾಲಗಳನ್ನು ಬಾಕಿಯಿರಿಸಿರುವ ಮತ್ತು ಅಕ್ರಮ ಹಣ ವಹಿವಾಟು ಆರೋಪಗಳ ಪ್ರಕರಣದಲ್ಲಿ ಬೇಕಾಗಿರುವ ಮದ್ಯದ ದೊರೆ ವಿಜಯ ಮಲ್ಯ ಅವರನ್ನು ಗಡಿಪಾರುಗೊಳಿಸುವ ಬಗ್ಗೆ ಬ್ರಿಟನ್ ಈವರೆಗೆ ಭಾರತಕ್ಕೆ ಯಾವುದೇ ಭರವಸೆಯನ್ನು ನೀಡಿಲ್ಲ.
ಈ ಕುರಿತ ವರದಿಗಳನ್ನು ತಳ್ಳಿಹಾಕಿದ ಮೂಲವು, ಗಡಿಪಾರು ಮನವಿ ನ್ಯಾಯಾಂಗ ಪ್ರಕ್ರಿಯೆಯಾಗಿದ್ದು, ಬ್ರಿಟನ್ ನಮಗೆ ಈವರೆಗೆ ಯಾವುದೇ ಭರವಸೆಯನ್ನು ನೀಡಿಲ್ಲ ಎಂದು ತಿಳಿಸಿತು.
ಈ ಮಧ್ಯೆ,ಭಾರತ ಮತ್ತು ಬ್ರಿಟನ್ ಗಡಿಪಾರಿಗೆ ಸಂಬಂಧಿಸಿದ ಬಾಕಿ ಇರುವ ಪ್ರಕರಣಗಳ ಕುರಿತಂತೆ ವಿವಿಧ ವಿಷಯಗಳ ಬಗ್ಗೆ ಸೋಮವಾರ ಜಂಟಿ ಕಾರ್ಯದರ್ಶಿ ಮಟ್ಟದಲ್ಲಿ ಚರ್ಚೆಗಳನ್ನು ನಡೆಸಿವೆ.
ಭಾರತವು ಇಲ್ಲಿಯ ನ್ಯಾಯಾಲಯಗಳಲ್ಲಿ ವಿಚಾರಣೆ ಎದುರಿಸಲು ಮಲ್ಯ ಸೇರಿದಂತೆ ಸುಮಾರು 60 ಜನರನ್ನು ಗಡಿಪಾರು ಮಾಡುವಂತೆ ಕಳೆದ ವರ್ಷದ ನವಂಬರ್‌ನಲ್ಲಿ ಬ್ರಿಟನ್‌ಗೆ ಕೋರಿಕೆ ಸಲ್ಲಿಸಿತ್ತು.
Next Story





