ರಾಜಕೀಯ ಲಾಭಕ್ಕಾಗಿ ಮಾತ್ರ ಹಿಂದುತ್ವದ ಸೋಗು ಹಾಕಿರುವ ಶಿವಸೇನೆ: ವಿಹಿಂಪ

ಹೊಸದಿಲ್ಲಿ,ಫೆ.21: ಶಿವಸೇನೆ ಎಂದೂ ಹಿಂದುತ್ವವಾದಿ ಸಂಘಟನೆಯಾಗಿರಲಿಲ್ಲ ಮತ್ತು ಕೇವಲ ರಾಜಕೀಯ ಲಾಭಗಳಿಕೆಗಾಗಿ ಹಿಂದುತ್ವವಾದಿಯಂತೆ ನಟಿಸುತ್ತಿದೆ ಎಂದು ವಿಶ್ವ ಹಿಂದು ಪರಿಷತ್ ಟೀಕಿಸಿದೆ.
ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಹಿಂಪ ಜಂಟಿ ಮಹಾ ಕಾರ್ಯದರ್ಶಿ ಸುರೇಂದ್ರ ಜೈನ್ ಅವರು, ಕೇವಲ ದೊರೆ ಛತ್ರಪತಿ ಶಿವಾಜಿಯ ಹೆಸರನ್ನು ಪಠಿಸುವುದರಿಂದ ಶಿವಸೇನೆ ಹಿಂದುತ್ವವಾದಿಯಾಗುವುದಿಲ್ಲ. ಬಾಬ್ರಿ ಮಸೀದಿ ಧ್ವಂಸದ ಬಳಿಕ ಮಾಧ್ಯಮಗಳು ಶಿವಸೇನೆಗೆ ಹಿಂದುತ್ವವಾದಿ ಹಣೆಪಟ್ಟಿ ಕಟ್ಟಿದ್ದವು ಎಂದರು.
1992ರಲ್ಲಿ ಸೇನೆಯ ಕಾರ್ಯಕರ್ತರು ಮಸೀದಿ ಕಟ್ಟಡದ ಭಾಗವನ್ನು ಉರುಳಿಸುತ್ತಾರೆ ಎಂಬ ಬಗ್ಗೆ ಶಿವಸೇನೆಯ ಸ್ಥಾಪಕ ಬಾಳ್ ಠಾಕ್ರೆಯವರಿಗೆ ಗೊತ್ತೇ ಇರಲಿಲ್ಲ ಎಂದು ಹೇಳುವ ಮೂಲಕ ತನ್ನ ಹೇಳಿಕೆಯನು ಜೈನ್ ಸಮರ್ಥಿಸಿಕೊಂಡರು.
ತನ್ನ ಪಕ್ಷದ ಕಾರ್ಯಕರ್ತರು ಮಸೀದಿಯನ್ನು ಧ್ವಂಸಗೊಳಿಸಿದ್ದರೆ ತನಗೆ ಆ ಬಗ್ಗೆ ಹೆಮ್ಮೆಯಿದೆ ಎಂದು ಠಾಕ್ರೆ ಹೇಳಿದ್ದರು ಮತ್ತು ಅದೊಂದು ಹೇಳಿಕೆ ಅವರಿಗೆ ಹಿಂದುತ್ವ ಹೋರಾಟಗಾರನ ಪಟ್ಟವನ್ನು ನೀಡಿತ್ತು ಎಂದರು.
Next Story







