ಅಝರ್‌ಬೈಜಾನ್: ಉಪಾಧ್ಯಕ್ಷೆಯಾಗಿ ಪತ್ನಿಯನ್ನೇ ನೇಮಿಸಿದ ಅಧ್ಯಕ್ಷ

ಬಾಕು (ಅಝರ್‌ಬೈಜಾನ್), ಫೆ. 21: ಅಝರ್‌ಬೈಜಾನ್ ಅಧ್ಯಕ್ಷ ಇಲ್ಹಮ್ ಅಲಿಯೆವ್ ಮಂಗಳವಾರ ತನ್ನ ಪತ್ನಿ ಮೆಹ್ರಿಬಾನ್ ಅಲಿಯೇವಾ ಅವರನ್ನು ಪ್ರಥಮ ಉಪಾಧ್ಯಕ್ಷೆಯನ್ನಾಗಿ ನೇಮಿಸಿದ್ದಾರೆ.
ದೇಶದ ಮೇಲಿನ ತನ್ನ ಕುಟುಂಬದ ಹಿಡಿತವನ್ನು ಇನ್ನಷ್ಟು ಗಟ್ಟಿಗೊಳಿಸುವ ಅಧ್ಯಕ್ಷರ ಕ್ರಮ ಇದು ಎಂಬುದಾಗಿ ಭಾವಿಸಲಾಗಿದೆ.
52 ವರ್ಷದ ಮೆಹ್ರಿಬಾನ್ 2005ರಿಂದಲೂ ಆಡಳಿತಾರೂಢ ಯೆನಿ ಅಝರ್‌ಬೈಜಾನ್ ಪಕ್ಷದ ಸಂಸದೆಯಾಗಿದ್ದಾರೆ.
2015ರಲ್ಲಿ ನಡೆಸಲಾದ ಜನಮತಗಣನೆಯ ಆಧಾರದಲ್ಲಿ ಸಂವಿಧಾನ ತಿದ್ದುಪಡಿ ತಂದು ಪ್ರಭಾವಿ ಪ್ರಥಮ ಉಪಾಧ್ಯಕ್ಷ ಸ್ಥಾನವನ್ನು ಸೃಷ್ಟಿಸಲಾಗಿತ್ತು. ಈಗ ಆ ಹುದ್ದೆಗೆ ತನ್ನ ಪತ್ನಿಯನ್ನೇ ದೇಶದ ಅಧ್ಯಕ್ಷರು ನೇಮಿಸಿದ್ದಾರೆ.
Next Story





