ಟ್ರಂಪ್ ನನ್ನ ಅಧ್ಯಕ್ಷರಲ್ಲ ಅಮೆರಿಕದಾದ್ಯಂತ ಬೃಹತ್ ಪ್ರತಿಭಟನೆ
.jpg)
ನ್ಯೂಯಾರ್ಕ್, ಫೆ. 21: ಅಮೆರಿಕ ಸೋಮವಾರ ‘ಅಧ್ಯಕ್ಷರುಗಳ ದಿನಾಚರಣೆ’ಯನ್ನು ಆಚರಿಸಿತು. ಆದರೆ, ಇದಕ್ಕೆ ವಿರುದ್ಧವಾಗಿ ಸುಮಾರು 10,000 ಮಂದಿ ಟ್ರಂಪ್ ವಿರೋಧಿ ಪ್ರತಿಭಟನಕಾರರು ‘ನನ್ನ ಅಧ್ಯಕ್ಷರಲ್ಲ’ ಎಂಬ ಘೋಷಣೆಗಳನ್ನು ಕೂಗುತ್ತಾ ನ್ಯೂಯಾರ್ಕ್‌ನ ಬೀದಿಗಳಲ್ಲಿ ಮೆರವಣಿಗೆ ಹೊರಟರು. ಅಷ್ಟೇ ಅಲ್ಲ, ಅಮೆರಿಕದಾದ್ಯಂತದ ನಗರಗಳು ಮತ್ತು ಪಟ್ಟಣಗಳಲ್ಲಿ ಈ ಪ್ರತಿಭಟನೆ ಮತ್ತು ಕೂಗು ಅನುರಣನಗೊಂಡಿತು.
ಜನವರಿ 20ರಂದು ಅಧಿಕಾರ ಸ್ವೀಕರಿಸಿದ ಬಳಿಕ ಒಂದು ತಿಂಗಳು ಕಳೆದರೂ, ಟ್ರಂಪ್ ವಿರುದ್ಧದ ಜನರ ಅಸಹನೆ ತಳಮಟ್ಟದಲ್ಲಿ ಇನ್ನೂ ಉಳಿದುಕೊಂಡಿದೆ ಎಂಬುದನ್ನು ಈ ಪ್ರತಿಭಟನೆಗಳು ತೋರಿಸಿವೆ.
ದೇಶದ ಅಧ್ಯಕ್ಷರುಗಳ ಗೌರವಾರ್ಥ ಆಚರಿಸುವ ‘ಅಧ್ಯಕ್ಷರುಗಳ ದಿನಾಚರಣೆ’ ರಾಷ್ಟ್ರೀಯ ರಜಾ ದಿನವಾಗಿದೆ.
Next Story





