ಮಂಗಳೂರಿನಿಂದ ವಿಮಾನದ ಮೂಲಕ ಜೀವಂತ ಹೃದಯ ರವಾನೆ

ಮಂಗಳೂರು, ಫೆ.೨೧: ಮಂಗಳೂರಿನ ಎ.ಜೆ.ಆಸ್ಪತ್ರೆಯಿಂದ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಜೀವಂತ ಹೃದಯವನ್ನು ರವಾನೆ ಮಾಡಲಾಗಿದೆ.
ಮಂಗಳೂರಿನಿಂದ ಮೊದಲ ಬಾರಿಗೆ ರವಾನೆಯಾದ ಹೃದಯ ಪ್ರಕರಣವಾಗಿದ್ದು, ರಸ್ತೆ ಅಪಘಾತಕ್ಕೀಡಾಗಿದ್ದ ಯುವಕನ ಹೃದಯವನ್ನು ರವಾನಿಸಲಾಗಿದೆ.
ರಸ್ತೆ ಅಪಘಾತಕ್ಕಿಡಾದ ಮೂಡಬಿದ್ರಿ ನಿವಾಸಿ ಸತೀಶ್ ಅವರ ಹೃದಯವನ್ನು ರವಾನಿಸಲಾಗಿದೆ. ಕುಟುಂಬಿಕರ ನಿರ್ಧಾರದಂತೆ ಕಿಡ್ನಿ, ಲಿವರ್, ಅಂಗಾಂಗ ದಾನ ಮಾಡಲಾಯಿತು.
ಹೃದಯವನ್ನು ವಿಮಾನದ ಮೂಲಕ ಬೆಂಗಳೂರಿಗೆ ರವಾನಿಸಲಾಗಿದೆ.
Next Story





