ಗಾಂಜಾ ಸೇವನೆ: ಇಬ್ಬರ ಬಂಧನ
ಮಂಗಳೂರು, ಫೆ.21: ಗಾಂಜಾ ಸೇವನೆ ಮಾಡಿ ಅಮಲಿನಲ್ಲಿದ್ದ ಇಬ್ಬರು ಯುವಕರನ್ನು ಎರಡು ಪ್ರತ್ಯೇಕ ಸ್ಥಳಗಳಲ್ಲಿ ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬೊಲ್ಪುಗುಡ್ಡೆಯ ನಿಖಿಲ್ ರಾಜ್ (19) ಹಾಗೂ ಕಾವೂರಿನ ಅಕ್ಷಯ್ ಜೋಗಿ (19) ಬಂಧಿತ ಆರೋಪಿಗಳು.
ಗಸ್ತಿನಲ್ಲಿದ್ದ ಪೊಲೀಸರಿಗೆ ಯುವಕರಿಬ್ಬರು ನಶೆಯಲ್ಲಿರುವ ಬಗ್ಗೆ ಮಾಹಿತಿ ಲಭಿಸಿರುವ ಹಿನ್ನೆಲೆಯಲ್ಲಿ ಪಾಂಡೇಶ್ವರ ಠಾಣಾ ನಿರೀಕ್ಷಕ ಬೆಳ್ಳಿಯಪ್ಪ ಅವರು ನೆಹರೂ ಮೈದಾನ ಪಾರ್ಕ್ ಬಳಿಯಿಂದ ಅಕ್ಷಯ್ ಜೋಗಿಯನ್ನು ಹಾಗೂ ಎಎಸ್‌ಐ ಅನಂತ ಮುರ್ಡೇಶ್ವರ ಅವರು ನಿಖಿಲ್ ರಾಜ್‌ನನ್ನು ನೆಲ್ಲಿಕಾಯಿ ರೋಡ್ ಬಳಿಯಿಂದ ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಾಗಿದೆ.
Next Story





