ಉಡುಪಿ: ಶ್ರೀಕೃಷ್ಣ ಚಿತ್ರಕಲಾ ಕೇಂದ್ರದ ವಾರ್ಷಿಕೋತ್ಸವ

ಉಡುಪಿ, ಫೆ.21: ಉಡುಪಿ ರಥಬೀದಿಯ ಉತ್ತರಾದಿಮಠದ ಶ್ರೀಕೃಷ್ಣ ಚಿತ್ರಕಲಾ ಹಾಗೂ ಕರಕುಶಲ ತರಬೇತಿ ಕೇಂದ್ರದ ವಾರ್ಷಿಕೋತ್ಸವವು ರವಿವಾರ ಜರಗಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಉತ್ತರಾದಿಮಠದ ಮಠಾಧಿಕಾರಿ ಪ್ರಕಾಶ್ ಆಚಾರ್ಯ ಮಾತನಾಡಿ, ಚಿಕ್ಕ ವಯಸ್ಸಿನ ಮಕ್ಕಳಿಗೆ ನಮ್ಮ ಕಲೆ ಮತುತಿ ಸಂಸ್ಕೃತಿಯ ತಿಳುವಳಿಕೆ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕೆಲವು ವಸ್ತುಗಳ ತಯಾರಿ ಹಾಗೂ ಅವರಿಗೆ ಧರ್ಮದ ಹಾಗೂ ಸಂಸ್ಕೃತಿಯ ಅರಿವನ್ನು ಕಲಿಸಿ ಕೊಡಬೇಕಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಸವಿತಾ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಶಾಲಾ ಶಿಕ್ಷಕಿ ಸಾಧನಾ ಡ್ರಾಯಿಂಗ್, ಕ್ಲೇ ಮಾಡೆಲ್, ನ್ಯೂಸ್ ಪೇಪರ್ ಡ್ರಾಫ್ಟ್ ಹಾಗೂ ಪಾಟ್ ಪೈಂಟಿಂಗ್ ಪೇಪರ್ ಕ್ರಾಫ್ಟ್ ಇದರ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Next Story





