ಉಡುಪಿ: ಜಯಂಟ್ಸ್ ಕರ್ನಾಟಕ ಫೆಡರೇಶನ್ ಅಧ್ಯಕ್ಷರ ಪದಗ್ರಹಣ

ಉಡುಪಿ, ಫೆ.21: ಜಯಂಟ್ಸ್ ಇಂಟರ್‌ನ್ಯಾಷನಲ್ ಕರ್ನಾಟಕ ಫೆಡ ರೇಶನ್ 6ರ ಅಧ್ಯಕ್ಷರ ಪದಗ್ರಹಣ ಸಮಾರಂಭವು ಇತ್ತೀಚೆಗೆ ಉಡುಪಿ ಕಿದಿಯೂರು ಹೋಟೆಲ್‌ನ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಮಣಿಪಾಲ ಕೆಎಂಸಿಯ ಜನರಲ್ ಸರ್ಜನ್ ಡಾ. ಗ್ಯಾಬ್ರಿಯಲ್ ಸುನಿಲ್ ರೋಡ್ರಿಗಸ್ ಮಾತನಾಡಿದರು. ಕೇಂದ್ರ ಸಮಿತಿಯ ಸದಸ್ಯ ದಿನಕರ್ ಅಮೀನ್ ಫೆಡರೇಶನ್ ಅಧ್ಯಕ್ಷರಾಗಿ ಆಯ್ಕೆಯಾದ ಮಧು ಸೂದನ್ ಹೇರೂರ್ ಅವರಿಗೆ ಪ್ರಮಾಣವಚನ ಬೋಧಿಸಿದರು.
ಬಳಿಕ ಆಡಳಿತ ಮಂಡಳಿಯ ಸದಸ್ಯರಿಗೆ ಪ್ರಮಾಣವಚನ ಬೋಧಿಸ ಲಾಯಿತು. ಉಪಾಧ್ಯಕ್ಷ ತೇಜೇಶ್ವರ ರಾವ್, ವಲಯ ನಿರ್ದೇಶಕ ದೇವದಾಸ ಕಾಮತ್, ಫೆಡರೇಶನ್ ಆಫೀಸರ್ ಜಯರಾಮ ರಾವ್, ಕಾರ್ಯ ದರ್ಶಿ ನಂದಕುಮಾರ್, ಉಡುಪಿ ಜಯಂಟ್ಸ್‌ನ ಅಧ್ಯಕ್ಷ ರಮೇಶ್ ಪೂಜಾರಿ, ಕಾರ್ಯದರ್ಶಿ ಆನಂದ್ ಉದ್ಯಾವರ ಉಪಸ್ಥಿತರಿದ್ದರು. ಡಾ. ಜಯರಾಜ್ ಪ್ರಕಾಶ್ ಹಾಗೂ ಜಗದೀಶ್ ಅಮೀನ್ ಕಾರ್ಯಕ್ರಮ ನಡೆಸಿಕೊಟ್ಟರು.
Next Story





