ವೃತ್ತಿಪರ ಬಾಕ್ಸಿಂಗ್‌ಗೆ ದಿವಾಕರ್ ಪ್ರಸಾದ್, ಪವನ್ ಮಾನ್

ಹೊಸದಿಲ್ಲಿ, ಫೆ.21: ಬೀಜಿಂಗ್ ಒಲಿಂಪಿಯನ್ ವಿಜೇಂದರ್ ಸಿಂಗ್ ಹಾಗೂ ಅಖಿಲ್‌ಕುಮಾರ್ ವೃತ್ತಿಪರ ಬಾಕ್ಸರ್‌ಗಳಾಗಿ ಪರಿವರ್ತಿತಗೊಂಡಿರುವುದರಿಂದ ಪ್ರೇರೇಪಿತರಾಗಿರುವ ಇನ್ನಿಬ್ಬರು ಬಾಕ್ಸರ್‌ಗಳು ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
2004ರ ಅಥೆನ್ಸ್ ಒಲಿಂಪಿಯನ್ ದಿವಾಕರ್ ಪ್ರಸಾದ್ ಹಾಗೂ ಎಂಎಂಎ ಚಾಂಪಿಯನ್ ಫೈಟರ್ ಪವನ್ ಮಾನ್ ಪ್ರೊ ಬಾಕ್ಸರ್‌ಗಳಾಗಿ ಪರಿವರ್ತಿತರಾಗಿದ್ದು ಐಒಎಸ್ ಬಾಕ್ಸಿಂಗ್ ಪ್ರೊಮೊಶನ್‌ನೊಂದಿಗೆ ಸಹಿ ಹಾಕಿದ್ದಾರೆ. ಒಟ್ಟು 13 ಬಾಕ್ಸರ್‌ಗಳು ಒಪ್ಪಂದಕ್ಕೆ ಸಹಿ ಹಾಕಿದ್ದು, ಡಬ್ಲುಬಿಸಿ ಏಷ್ಯಾ ಪೆಸಿಫಿಕ್ ವೆಲ್ಟರ್‌ವೇಟ್ ಚಾಂಪಿಯನ್ ನೀರಜ್ ಗೊಯಟ್, ಇನ್ನೋರ್ವ ಪಿಬಿಒಐ ಬಾಕ್ಸರ್ ಅಮನ್‌ದೀಪ್ ಸಿಂಗ್ ಕೂಡ ಐಒಎಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಗುರ್ಗಾಂವ್‌ನಲ್ಲಿ ವಿದೇಶಿ ತರಬೇತಿದಾರರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯಲಿರುವ ಈ ಇಬ್ಬರು ಬಾಕ್ಸರ್‌ಗಳು ಎಪ್ರಿಲ್‌ನಲ್ಲಿ ವೃತ್ತಿಪರ ಬಾಕ್ಸಿಂಗ್‌ಗೆ ಪಾದಾರ್ಪಣೆಗೈಯುವ ಸಾಧ್ಯತೆಯಿದೆ.
Next Story





