ರಸ್ತೆ ಅಪಘಾತಕ್ಕೆ ಮುಸ್ಲಿಮ್ ಲೀಗ್ ಮುಖಂಡ, ಗ್ರಾಪಂ ಉಪಾಧ್ಯಕ್ಷ ಬಲಿ

ಕಾಸರಗೋಡು, ಫೆ.22: ಕಾರು ಮತ್ತು ಸ್ಕೂಟರ್ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಗ್ರಾಪಂ ಉಪಾಧ್ಯಕ್ಷ ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಮುಸ್ಲಿಂ ಲೀಗ್ ಮುಖಂಡ, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಗಫೂರ್ ಮೃತಪಟ್ಟವರಾಗಿದ್ದಾರೆ.
ಈ ಅಪಘಾತವು ಮಂಗಳವಾರ ನಡೆದಿತ್ತು. ಮಂಗಳವಾರ ಸಂಜೆ ರಾಷ್ಟ್ರೀಯ ಹೆದ್ದಾರಿಯ ಚೌಕಿ ಸಿಪಿಸಿಆರ್‌ಐ ಬಳಿ ಗಫೂರ್ ಸಂಚರಿಸುತ್ತಿದ್ದ ಸ್ಕೂಟರ್‌ಗೆ ಇನೋವಾ ಕಾರು ಢಿಕ್ಕಿ ಹೊಡೆದಿತ್ತು. ಇದರಿಂದ ಗಂಭೀರ ಗಾಯಗೊಂಡಿದ್ದ ಗಫೂರ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರಿಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಮುಸ್ಲಿಂ ಲೀಗ್ ಪಕ್ಷದಲ್ಲಿ ಹಲವು ಸ್ಥಾನಗಳನ್ನು ಹೊಂದಿದ್ದ ಅಬ್ದುಲ್ ಗಫೂರ್ ಅವರು, ನವಂಬರ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಗೆದ್ದು ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
Next Story





