ತಮಿಳುನಾಡಿನಾದ್ಯಂತ ಡಿಎಂಕೆ ಒಂದು ದಿನ ಉಪವಾಸ ಮುಷ್ಕರ

ಚೆನ್ನೈ,ಫೆ.22: ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಶನಿವಾರ ವಿಧಾನಸಭೆಯಲ್ಲಿ ಮಂಡಿಸಿದ ವಿಶ್ವಾಸ ಮತಯಾಚನೆಯ ರೀತಿಯನ್ನು ವಿರೋಧಿಸಿ ಬುಧವಾರ ರಾಜ್ಯಾದ್ಯಂತ ಪ್ರತಿಪಕ್ಷ ಡಿಎಂಕೆ ಒಂದು ದಿನ ಉಪವಾಸ ಮುಷ್ಕರ ಆರಂಭಿಸಿದೆ.
ವಿಧಾನಸಭೆಯಲ್ಲಿ ವಿರೋಧಪಕ್ಷಗಳಿಲ್ಲದೆ ವಿಶ್ವಾಸ ಮತ ಗೆದ್ದುಕೊಂಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಇದು ವಿಧಾನಸಭೆಯ ನಿಯಮಕ್ಕೆ ವಿರುದ್ಧವಾದ ಹೆಜ್ಜೆಯಾಗಿತ್ತು ಎಂದು ಡಿಎಂಕೆ ಆರೋಪಿಸಿದೆ.
ತಿರುಚಿರಾಪಲ್ಲಿಯಲ್ಲಿ ಬುಧವಾರ ಆರಂಭವಾದ ಉಪವಾಸ ಮುಷ್ಕರಕ್ಕೆ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಪ್ರತಿಪಕ್ಷದ ನಾಯಕ ಎಂಕೆ ಸ್ಟಾಲಿನ್ ನೇತೃತ್ವ ವಹಿಸಿದ್ದರು. ಹಿರಿಯ ಮುಖಂಡರಾದ ಕೆಎನ್ ನೆಹ್ರೂ, ರಾಜ್ಯಸಭಾ ಸದಸ್ಯರಾದ ತಿರುಚಿ ಸಿಲ್ವಾ, ಮೈತ್ರಿ ಪಕ್ಷದ ಮುಖಂಡರು, ರೈತ ಸಂಘಟನೆಯವರು ಉಪವಾಸ ಧರಣಿಗೆ ಸಾಥ್ ನೀಡಿದರು. ಸುಮಾರು 3000 ಮಂದಿ ಉಪವಾಸ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.
ಡಿಎಂಕೆ ಎಂಎಲ್‌ಎಗಳು ಹಾಗೂ ಇತರ ನಾಯಕರು ಚೆನ್ನೈನ ವಿವಿಧ ಸ್ಥಳಗಳಲ್ಲಿ ಉಪವಾಸ ಮುಷ್ಕರ ನಡೆಸುತ್ತಿದ್ದಾರೆ.
Next Story