ಮನೆಮೇಲೆ ಮಗುಚಿಬಿದ್ದ ಲಾರಿ: ಇಬ್ಬರ ಸಾವು, ನಾಲ್ವರಿಗೆ ಗಾಯ
.jpg)
ತೊಡುಪುಝ, ಫೆ. 22: ವಣ್ಣಪ್ಪುರಂ ಚೀಂಗಲ್ ನಗರದಲ್ಲಿ ನಿಯಂತ್ರಣ ಕಳಕೊಂಡ ಲಾರಿಯೊಂದು ಮನೆಮೇಲೆ ಮಗುಚಿಬಿದ್ದು ಇಬ್ಬರು ಮೃತರಾಗಿದ್ದಾರೆ. ಮೂವರು ಗಾಯಗೊಂಡಿದ್ದಾರೆ. ಇಂದು ಬೆಳಗ್ಗಿನ ಜಾವ 2:30ಕ್ಕೆ ಘಟನೆ ನಡೆದಿದೆ.
ಕಬ್ಬಿಣದ ಕಂಬಿಗಳನ್ನು ಹೇರಿಕೊಂಡು ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ಕಳದುಕೊಂಡು ಮನೆಯ ಮೇಲೆ ಮಗುಚಿಬಿದ್ದಿತ್ತು. ಮೃತಪಟ್ಟವರಲ್ಲಿ ಮನೆಯಲ್ಲಿ ಮಲಗಿ ನಿದ್ರಿಸಿದ ಒಬ್ಬ ವ್ಯಕ್ತಿಯೂ ಸೇರಿದ್ದಾನೆ. ಲಾರಿ ಚಾಲಕ, ಕ್ಲೀನರ್ ಮತ್ತು ಇಬ್ಬರು ಗಾಯಗೊಂಡಿದ್ದಾರೆಂದು ವರದಿ ತಿಳಿಸಿದೆ.
Next Story