ಲಿಬಿಯ ಕರಾವಳಿಯಲ್ಲಿ 74 ವಲಸಿಗರ ಮೃತದೇಹಗಳು ಪತ್ತೆ

ಟ್ರಿಪೋಲಿ (ಲಿಬಿಯ), ಫೆ. 22: ಯುರೋಪನ್ನು ತಲುಪುವ ಯತ್ನದಲ್ಲಿ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿದ 74 ವಲಸಿಗರ ಮೃತದೇಹಗಳು ಲಿಬಿಯ ರಾಜಧಾನಿ ಟ್ರಿಪೋಲಿಯ ಪಶ್ಚಿಮದ ಸಮುದ್ರ ತೀರದಲ್ಲಿ ದಡಸೇರಿವೆ ಎಂದು ರೆಡ್ ಕ್ರೆಸೆಂಟ್ ಮಂಗಳವಾರ ಹೇಳಿದೆ.
ಹಾಳಾದ ದೋಣಿ ಮತ್ತು ಅದರೊಳಗಿದ್ದ ಮೃತದೇಹಗಳನ್ನು ಕಂಡು ಟ್ರಿಪೋಲಿಯಿಂದ ಸುಮಾರು 45 ಕಿಲೋಮೀಟರ್ ದೂರದ ಝಾವಿಯ ಉಪನಗರದ ಹರ್ಚ ಎಂಬ ಗ್ರಾಮದ ಜನರು ಪೊಲೀಸರಿಗೆ ಮಾಹಿತಿ ನೀಡಿದರು.
ತುರ್ತು ಸೇವಾ ಸಿಬ್ಬಂದಿ ಸಮುದ್ರ ತೀರದಲ್ಲಿ ಹೆಚ್ಚಿನ ಮೃತದೇಹಗಳನ್ನು ಪತ್ತೆಹಚ್ಚಿದರು ಹಾಗೂ ಇನ್ನೂ ಹೆಚ್ಚಿನ ದೇಹಗಳು ಸಮುದ್ರದಲ್ಲಿವೆ ಎಂದು ಶಂಕಿಸಲಾಗಿದೆ.
ಮೃತದೇಹಗಳನ್ನೊಳಗೊಂಡ ಕಪ್ಪು ಮತ್ತು ಬಿಳುಪು ಚೀಲಗಳ ಉದ್ದದ ಸಾಲು ನೀರಿನ ಅಂಚಿನಲ್ಲಿ ಕಂಡುಬಂತು.
ವಲಸಿಗರನ್ನೊಳಗೊಂಡ ದೋಣಿ ರವಿವಾರ ಕೆಟ್ಟು ನಿಂತಿರುವ ಸಾಧ್ಯತೆಯಿದೆ ಎಂದು ಅಂತಾರಾಷ್ಟ್ರೀಯ ವಲಸಿಗ ಸಂಘಟನೆ ಹೇಳಿದೆ. ಸುಮಾರು 100ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಸಾಧ್ಯತೆಯಿದೆ.
Next Story





