ಎನ್‌ಟಿಎಸ್‌ಇ ಪರೀಕ್ಷೆ: ಸಿಎಫ್ಎಎಲ್‌ನ 10 ಮಂದಿ ತೇರ್ಗಡೆ
ಮಂಗಳೂರು, ಫೆ.22: ಎಸೆಸೆಲ್ಸಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದಕ್ಕಾಗಿ ನಡೆಯುವ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (ಎನ್‌ಟಿಎಸ್‌ಇ)ಯಲ್ಲಿ ನಗರದ ಸೆಂಟರ್ ಫಾರ್ ಅಡ್ವಾನ್ಸ್‌ಡ್ ಲರ್ನಿಂಗ್(ಸಿಎ್ಎಎಲ್)ನಲ್ಲಿ ತರಬೇತಿ ಪಡೆದ 10 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಫ್ಎಎಲ್‌ನ ಸಂಚಾಲಕಿ ಸೆವೆರಿನ್ ರೊಸಾರಿಯೊ ಈ ಬಾರಿಯ ಎನ್‌ಟಿಎಸ್‌ಇ ಪರೀಕ್ಷೆಯಲ್ಲಿ ದ.ಕ.ಜಿಲ್ಲೆಯಿಂದ 8 ಮಂದಿ ಹಾಗೂ ಉಡುಪಿಯಿಂದ 7 ಮಂದಿ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದಿದ್ದಾರೆ. ಇವರಲ್ಲಿ ದ.ಕ.ಜಿಲ್ಲೆಯಿಂದ ಆಯ್ಕೆಯಾದ ಎಲ್ಲರೂ ಹಾಗೂ ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ಇಬ್ಬರು ಸಿಎಫ್ಎಎಲ್‌ನಲ್ಲಿ ತರಬೇತಿ ಪಡೆದಿದ್ದಾರೆ ಎಂದರು.
ವಿದ್ಯಾರ್ಥಿಗಳಾದ ಶ್ರೇಯಸ್ ವಾಸುದೇವ್ ಪೈ ಹಾಗೂ ಜನೆಟ್ ಕೆ.ಜಾಯ್(10ನೆ ರ‍್ಯಾಂಕ್), ಅಂಕುಶ್ ಮೊಗೇರ್(12ನೆ ರ‍್ಯಾಂಕ್), ಸಮರ್ಥ್ ಎಂ.ಭಟ್(15ನೆ ರ‍್ಯಾಂಕ್), ಸುಬ್ರಹ್ಮಣ್ಯ ಹಂದೆ(16ನೆ ರ‍್ಯಾಂಕ್), ರಜತ್ ರಾವ್(19ನೆ ರ‍್ಯಾಂಕ್), ಅನುಷ್ಕಾ ಇರೋಡಿ (21ನೆ ರ‍್ಯಾಂಕ್), ಸುಶ್ಮಿತಾ ಎಸ್.ನಾಯಕ್ ಹಾಗೂ ಸೂರಜ್ ಸಾಮಗ(22ನೆ ರ‍್ಯಾಂಕ್), ಪ್ರಸೀದಾ ಪ್ರವೀಣ್(23ನೆ ರ‍್ಯಾಂಕ್) ಗಳಿಸಿದ್ದಾರೆ. ಎಲ್ಲಾ ರ‍್ಯಾಂಕ್ಗಳು ರಾಜ್ಯದ ಮಟ್ಟದ ರ್ಯಾಂಕ್‌ಗಳಾಗಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಚಾಲಕ ವಿಜಯ್ ಮೊರಾಸ್ ಉಪಸ್ಥಿತರಿದ್ದರು.







