ಮಂಗಳೂರು: ಫೆ.24 ಮತ್ತು 25ರಂದು ಎರಡು ದಿನಗಳ ಕಾಲ ಮದ್ಯ ನಿಷೇಧಕ್ಕೆ ಜಿಲ್ಲಾಧಿಕಾರಿ ಆದೇಶ

ಮಂಗಳೂರು: ಫೆ.25ರಂದು ಸಂಘ ಪರಿವಾರ ದಕ್ಷಿಣ ಕನ್ನಡ ಜಿಲ್ಲೆ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಫೆ.24 ಮತ್ತು ಫೆ.25ರಂದು ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಮದ್ಯ ನಿಷೇಧ ಮಾಡಿದೆ.
ಫೆ.24 ಮತ್ತು ಫೆ.25 ಎರಡು ದಿನಗಳ ಕಾಲ ವೈನ್ ಶಾಪ್, ಬಾರ್,ರೆಸ್ಟೋರೆಂಟ್ ಬಂದ್ ಮಾಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಜಿ ಜಗದೀಶ್ ಆದೇಶ ಹೊರಡಿಸಿದ್ದಾರೆ,
ಫೆ.25ರಂದು ಸಿಪಿಐಎಂ ನಿಂದ ಐಕ್ಯತಾ ರ‍್ಯಾಲಿ ಹಿನ್ನಲೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಲಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಜಿಲ್ಲೆ ಪ್ರವೇಶಿಸದಂತೆ ಫೆ.25ರಂದು ಸಂಘ ಪರಿವಾರ ಹರತಾಳ ನಡೆಸಲು ಕರೆ ನೀಡಿದೆ.
Next Story





