ಪ್ರತಾಪ್ ಪೂಜಾರಿ ಕೊಲೆ ಪ್ರಕರಣ: 8 ಮಂದಿ ಬಂಧನ

ಮಂಗಳೂರು, ಫೆ. 22: ನಿಡ್ಡೇಲ್‌ನಲ್ಲಿ ಇತ್ತೀಚೆಗೆ ನಡೆದ ಪ್ರತಾಪ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ನಗರ ಠಾಣಾ ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮಿಥುನ್, ಕೌಶಿಕ್, ಸಾಗರ್, ನಿತಿಶ್, ತಿಲಕ್, ನಿಖಿಲ್, ಮನೀಶ್, ಶರಣ್ ಎಂದು ಗುರುತಿಸಲಾಗಿದೆ.
ಹಣದ ವಿಚಾರಕ್ಕೆ ಸಂಬಂಧಿಸಿ ಇತ್ತೀಚೆಗೆ ಗುಂಪೊಂದು ಪ್ರತಾಪ್‌ನನ್ನು ಕೊಲೆಗೈದಿತ್ತು. ಈ ಸಂದರ್ಭದಲ್ಲಿ ಪ್ರತಾಪ್‌ನ ಸ್ನೇಹಿತ ಮಣಿಕಂಠ ಎಂಬವನ ಹಲ್ಲೆ ನಡೆಸಿ ಗಂಭೀರ ಗಾಯಗೊಳಿಸಿತ್ತು. ಘಟನೆಯಲ್ಲಿ ಶಿವು, ರಾಜೇಶ್ ಮತ್ತು ಮನೋಜ್ ಸಹಿತ 11 ಮಂದಿ ಆರೋಪಿಗಳೆಂದು ಗುರುತಿಸಲಾಗಿದ್ದು, ಈ ಪೈಕಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
Next Story





