ಉಡುಪಿ: ಅಪರಿಚಿತ ಶವ ಪತ್ತೆ
ಉಡುಪಿ, ಫೆ.22: ಉಡುಪಿ ಅಂಬಾಗಿಲಿನಲ್ಲಿ ರಾ.ಹೆದ್ದಾರಿ 66ರ ಪಕ್ಕದಲ್ಲಿ ಕಸದ ರಾಶಿಯ ಮೇಲೆ ಸುಮಾರು 60 ವರ್ಷ ಪ್ರಾಯದ ಗಂಡಸಿನ ಮೃತದೇಹ ಅಂಗಾತ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವ್ಯಕ್ತಿ ಯಾವುದೋ ಕಾಯಿಲೆ ಅಥವಾ ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ಇದೆ.
ಮೃತವ್ಯಕ್ತಿ 1710 ಸೆಂಮೀ ಉದ್ದ ಇದ್ದು, ಸಾಧಾರಣ ಶರೀರ, ಎಣ್ಣೆಕಪ್ಪು ಮೈಬಣ್ಣ, ಬಿಳಿಕೂದಲ, ಬಿಳಿ ಗಡ್ಡ ಮೀಸೆ ಹೊಂದಿದ್ದು, ಕುತ್ತಿಗೆಯ ಕೆಳಗೆ ಕಪ್ಪುಎಳ್ಳು ಮಚ್ಚೆ ಇದೆ. ಕಪ್ಪುಬಣ್ಣದ ಪ್ಯಾಂಟ್, ಬಿಳಿ ಬಣ್ಣದ ತುಂಬು ತೋಳಿನ ಶರ್ಟ್ ಧರಿಸಿದ್ದಾರೆ. ಈ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Next Story





