ಜಾತ್ರೆಗೆ ಕರೆದುಕೊಂಡು ಹೋಗದಿದ್ದಕ್ಕೆ ಮನನೊಂದು ಶಾಲಾ ಬಾಲಕ ಆತ್ಮಹತ್ಯೆ

ಮುಂಡಗೋಡ, ಫೆ.22: ಜಾತ್ರೆಗೆ ಕರೆದುಕೊಂಡು ಹೋಗಿಲ್ಲಾ ಎಂದು 7 ತರಗತಿ ವಿದ್ಯಾರ್ಥಿ ಬೇಸರಿಸಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡ ಘಟನೆ ತಾಲೂಕಿನ ಮೈನಳ್ಳಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಮೈನಳ್ಳಿ ಗ್ರಾಮದ ಕಿರಣ ಫಕೀರಪ್ಪ ವಡ್ಡರ(14), ಎಂದು ಗುರುತಿಸಲಾಗಿದೆ.
ಮೃತನು 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದ್ದು, ಬುಧವಾರ ಶಾಲೆಗೆ ಹೋಗದೇ ಮನೆಯಲ್ಲಿದ್ದ ಎನ್ನಲಾಗಿದ್ದು, ಮಧ್ಯಾಹ್ನ ಈತನ ತಂದೆ ಹಾನಗಲ್ ಜಾತ್ರೆಗೆ ಹೋಗುತ್ತಿದ್ದ ವಿಷಯ ಗೊತ್ತಾಗಿ ತಾನೂ ಜಾತ್ರೆಗೆ ಬರುವುನೆಂದು ಹಠ ಹಿಡಿದಿದ್ದನು ಎನ್ನಲಾಗಿದೆ.
ತಂದೆ ಫಕೀರಪ್ಪ ನೀನು ಬರವುದು ಬೇಡ ಪರೀಕ್ಷೆ ಇದೆ ಈ ಸಮಯದಲ್ಲಿ ನಿನ್ನನು ಕರೆದುಕೊಂಡು ಹೋದರೆ ನಿನ್ನ ಅಭ್ಯಾಸ ಹಾಳಾಗುತ್ತದೆ ಎಂದು ಬುದ್ದಿವಾದ ಹೇಳಿರುವುದನ್ನು ಮನಸ್ಸಿಗೆ ಹಚ್ಚಿಕೊಂಡು ತನಗೆ ಜಾತ್ರೆಗೆ ಕರೆದುಕೊಂಡು ಹೋಗಿಲ್ಲಾ ಎಂದು ಮನನೊಂದು ತಮ್ಮ ಮನೆಯ ಅಡುಗೆ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಈತನ ತಂದೆ ಫಕೀರಪ್ಪ ಮುಂಡಗೋಡ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.







