ಫೆ.25ರಂದು ನಡೆಯುವ ಹರತಾಳಕ್ಕೆ ಬಿಜೆಪಿ ಬೆಂಬಲ

ಮಂಗಳೂರು,ಫೆ.22: ಕೇರಳ ಮುಖ್ಯ ಮಂತ್ರಿ ಜಿಲ್ಲೆಗೆ ಆಗಮಿಸುವುದನ್ನು ವಿರೋಧಿಸಿ ಫೆ.24ರಂದು ನಗರದ ಜ್ಯೋತಿ ಸರ್ಕಲ್‌ನ ಅಂಬೇಡ್ಕರ್ ವೃತ್ತದಿಂದ ಬೆಳಗ್ಗೆ 10 ಗಂಟೆಗೆ ನೆಹರೂ ಮೈದಾನದ ವರೆಗೆ ರ‍್ಯಾಲಿ ಮತ್ತು ಬಳಿಕ ನೆಹರೂ ಮೈದಾನದಲ್ಲಿ ಸಮಾವೇಶವನ್ನು ವಿಎಚ್‌ಪಿ ಮತ್ತು ಬಜರಂಗದಳ ಹಮ್ಮಿಕೊಂಡಿದೆ. ಈ ರ‍್ಯಾಲಿ ಹಾಗೂ ಪ್ರತಿಭಟನಾ ಸಭೆಗೆ ಮತ್ತು ಫೆ.25ರಂದು ನಡೆಯುವ ಹರತಾಳಕ್ಕೂ ಬಿಜೆಪಿ ಬೆಂಬಲ ನೀಡಲಿದೆ ಎಂದು ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಟಂದೂರು ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಯೊಗೀಶ್ ಭಟ್,ಮೋನಪ್ಪ ಭಂಡಾರಿ,ಬ್ರಿಜೇಶ್ ಚೌಟ,ಕಿಶೋರ್ ಮೊದಲಾದವರು ಉಪಸ್ಥಿತರಿದ್ದರು.
Next Story





