ಮೂಡಬಿದಿರೆ: ಆಳ್ವಾಸ್‌ನಲ್ಲಿ ಮಾಧ್ಯಮ ಬರವಣಿಗೆ ಕಾರ್ಯಾಗಾರ

ಮೂಡಬಿದಿರೆ, ಫೆ.22: ವಿದ್ಯಾರ್ಥಿಗಳು ತಾವು ಅಭ್ಯಸಿಸುವ ವಿಷಯವನ್ನು ಕೇವಲ ಓದುತ್ತೇನೆಎಂಬುದನ್ನು ನೋಡದೆ ಅಧ್ಯಯನಮಾಡುತ್ತಿದ್ದೇನೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ತಾವು ಅಧ್ಯಯನ ಮಾಡುವ ವಿಷಯವನ್ನು ಕುತೂಹಲದಿಂದ, ಉತ್ಯುಕರಾಗಿ ನೋಡಬೇಕು ಆವಾಗ ಶಿಕ್ಷಣ ಶಿಕ್ಷೆಯಾಗುವುದಿಲ್ಲ ಎಂದು ಸಿಐಎಲ್ (ಸೆಂಟರ್ ಫಾರ್ ಇಂಟಗ್ರೇಟೆಡ್ ಲರ್ನಿಂಗ್) ನ ಸಂಯೋಜಕ, ಹಿರಿಯ ಪತ್ರಕರ್ತ ಎಸ್.ನಂದಗೋಪಾಲ್ ತಿಳಿಸಿದರು.
ಅವರು ಆಳ್ವಾಸ್ ಪದವಿಕಾಲೇಜಿನ ಪತ್ರಿಕೋದ್ಯಮ ವಿಭಾಗ ಮಿಜಾರಿನ ಶೋಭಾವನದಲ್ಲಿ ಆಯೋಜಿಸಿದ ಮಾಧ್ಯಮ ಬರವಣಿಗೆಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಒಬ್ಬ ಉತ್ತಮ ಪತ್ರಕರ್ತನಾದವನು, ಸರಿಯಾದ ಬರಹವನ್ನು ಸರಿಯಾದ ಸಮಯದಲ್ಲಿ, ಸರಿಯಾದ ಮಾಧ್ಯಮದಲ್ಲಿ ಬರೆಯಬೇಕು. ಉತ್ತಮ ಸಂವಹನ, ಆಲಿಸುವುದು, ಗಮನಿಸುವುದು ಹಾಗೂ ಬರವಣಿಗೆ ಪಸ್ತುತ ಕಾಲಘಟ್ಟದಲ್ಲಿ ಉತ್ತಮ ಪತ್ರಕರ್ತನಾದವನಿಗೆ ಇರಬೇಕಾದ ಅರ್ಹತೆ ಎಂದರು.
ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ, ಪ್ರಕೃತಿಯೊಂದಿಗೆ ಕಲಿಕೆ, ಸಣ್ಣಕಥೆಗಳ ಬರವಣಿಗೆ, ವಿವಿಧ ಮಾಧ್ಯಮ ಬರವಣಿಗೆಗಳ ಬಗೆಗೆ ಪ್ರಾಯೋಗಿಕ ಮಾಹಿತಿ ನೀಡಲಾಯಿತು. ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥೆ ರೇಷ್ಮಾ ಹಾಗೂ ಉಪನ್ಯಾಸಕಿ ಗೀತಾ ಏ.ಜೆ.ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಟ್ವಿಂಕಲ್ ವಂದಿಸಿದರು. ಚೈತಾಲಿ ರೈ ಕಾರ್ಯಕ್ರಮ ನಿರೂಪಿಸಿದರು.







