ಸುಳ್ಯ ತಾಲೂಕಿನ ಗ್ರಾಪಂಗಳಿಗೆ ಎಂ.ಎಲ್.ಸಿ ಪ್ರತಾಪ್‌ಚಂದ್ರ ಶೆಟ್ಟಿ ಭೇಟಿ: ನಾಲ್ಕು ಗ್ರಾಪಂಗಳಿಗೆ ತಲಾ 3ಲಕ್ಷ ರೂ ಅನುದಾ

ಸುಳ್ಯ, ಫೆ.22: ಸುಳ್ಯ ತಾಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳಿಗೆ ಎಂ.ಎಲ್.ಸಿ ಪ್ರತಾಪ್‌ಚಂದ್ರ ಶೆಟ್ಟಿ ಬುಧವಾರ ಭೇಟಿ ನೀಡಿ, ತಲಾ 3ಲಕ್ಷ ರೂ ಅನುದಾನ ಘೋಷಿಸಿದ್ದಾರೆ.
ಅವರು ಸಂಪಾಜೆ, ಪೆರುವಾಜೆ, ಅಜ್ಜಾವರ, ಬೆಳ್ಳಾರೆ ಗ್ರಾಮ ಪಂಚಾಯಿತಿಗಳಿಗೆ ಅಧಿಕೃತ ಭೇಟಿ ನೀಡಿ ತಲಾ ಮೂರು ಲಕ್ಷ ರೂ ಅನುದಾನ ಘೋಷಿಸಿ ಮಾತನಾಡಿ, ಸ್ಥಳೀಯ ಪಂಚಾಯಿತಿಗಳು ಗಟ್ಟಿಗೊಳಿಸಲು ನಾನು ಪಂಚಾಯಿತಿಗಳಿಗೆ ಭೇಟಿ ನೀಡಿ, ಅನುದಾನ ಘೋಷಿಸಿದ್ದೇನೆ. ಇದೇ ರೀತಿ ಎಲ್ಲ ಶಾಸಕರುಗಳು, ಸಂಸದರು ತಮಗೆ ಬರುವ ನಿಧಿಯಿಂದ ಪಂಚಾಯಿತಿಗಳ ಅಭಿವೃದ್ಧಿಗೆ ನೀಡಿದಾಗ, ಇನ್ನಷ್ಟು ಪಂಚಾಯಿತಿಗಳು ಸದೃಢಗೊಳ್ಳುತ್ತದೆ. ಈ ಮೂಲಕ ಗ್ರಾಮೀಣ ಜನರ ಬದುಕು ಸಹ ಹಸನಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಕೆ.ಪಿ.ಸಿ.ಸಿ ಸದಸ್ಯ ಡಾರಘು, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಪಕ್ಷದ ಮುಖಂಡರು, ಗ್ರಾ.ಪಂ.ಅಧ್ಯಕ್ಷರುಗಳು, ಸದಸ್ಯರು ಉಪಸ್ಥಿತರಿದ್ದರು. ಅಜ್ಜಾವರ ಗ್ರಾ.ಪಂ.ಗೆ ಭೇಟಿ ನೀಡುವ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ, ಜಿ.ಪಂ.ಸದಸ್ಯೆ ಪುಷ್ಪಾವತಿ ಬಾಳಿಲ ಇದ್ದರು.





