ಕರ್ಣಾಟಕ ಬ್ಯಾಂಕ್‌ಗೆ ‘ಐಬಿಎ-ಬ್ಯಾಂಕಿಂಗ್ ಟೆಕ್ನಾಲಜಿ-2017’ ಪ್ರಶಸ್ತಿ

ಮಂಗಳೂರು, ಫೆ.22: ಕರ್ಣಾಟಕ ಬ್ಯಾಂಕ್ ಸಣ್ಣ ಬ್ಯಾಂಕ್ ವಿಭಾಗದಲ್ಲಿ ಆರ್ಥಿಕ ಸೇರ್ಪಡೆ ಉಪಕ್ರಮಗಳಿಗೆ ಪ್ರಥಮ ಹಾಗೂ ಡಿಜಿಟಲ್ ಮತ್ತು ಚಾನೆಲ್ ತಂತ್ರಜ್ಞಾನದ ಅತ್ಯುತ್ತಮ ಬಳಕೆಗಾಗಿ ದ್ವಿತೀಯ ಸ್ಥಾನಗಳನ್ನು ಪಡೆದು ಕೊಂಡಿದೆ.
ಇತ್ತೀಚೆಗೆ ಮುಂಬೈಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕರ್ಣಾಟಕ ಬ್ಯಾಂಕ್‌ನ ಮಹಾಪ್ರಬಂಧಕರಾದ ಮಹಾಬಲೇಶ್ವರ ಎಂ.ಎಸ್. ಮತ್ತು ರಾಘವೇಂದ್ರ ಭಟ್ ಅವರು ಆರ್‌ಬಿಐನ ಉಪ ಗವರ್ನರ್ ಡಾ.ವಿರಲ್ .ವಿ. ಆಚಾರ್ಯ ಹಾಗೂ ತೀರ್ಪುಗಾರರ ಮಂಡಳಿಯ ಅಧ್ಯಕ್ಷ ಡಾ.ರಘುನಾಥ ಮಾಶೇಲ್ಕರ್ ಅವರಿಂದ ಅನುಕ್ರಮವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಐಸಿಐಸಿ ಬ್ಯಾಂಕ್‌ನ ಎಂ.ಡಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಾ ಕೊಚ್ಚಾರ್ ಉಪಸ್ಥಿತರಿದ್ದರು.
Next Story





