ಮಂಗಳೂರು: ಕರಾವಳಿ ಸೌಹಾರ್ದ ರ‍್ಯಾಲಿಯ ಪ್ರಚಾರ ಜಾಥಾಕ್ಕೆ ಚಾಲನೆ

ಮಂಗಳೂರು, ಫೆ.23: ಸಿಪಿಎಂ ವತಿಯಿಂದ ಫೆ.25ರಂದು ನಗರದ ನೆಹರೂ ಮೈದಾನದಲ್ಲಿ ನಡೆಯಲಿರುವ ಕರಾವಳಿ ಸೌಹಾರ್ದ ರ್ಯಾಲಿಯ ಅಂಗವಾಗಿ ವಾಹನ ಪ್ರಚಾರ ಜಾಥಾಕ್ಕೆ ನಗರದ ಸೆಂಟ್ರಲ್ ಮಾರುಕಟ್ಟೆ ಬಳಿ ಇಂದು ಬೆಳಗ್ಗೆ ಚಾಲನೆ ದೊರೆಯಿತು.
ಜಾಥಾಕ್ಕೆ ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ ಚಾಲನೆ ನೀಡಿ ಮಾತನಾಡಿದರು. ಜಾಥಾವು ಇಂದು ಮತ್ತು ನಾಳೆ ನಗರಾದ್ಯಂತ ಪ್ರಚಾರ ನಡೆಸಲಿದೆ.
ಪ್ರಚಾರ ಜಾಥಾದಲ್ಲಿ ಪಕ್ಷದ ಮುಖಂಡರಾದ ಯಾದವ ಶೆಟ್ಟಿ, ವಸಂತ ಆಚಾರಿ, ಸುನೀಲ್ ಕುಮಾರ್ ಬಜಾಲ್, ಬಿ.ಕೆ.ಇಮ್ತಿಯಾಝ್ ಮೊದಲಾವದವರು ಉಪಸ್ಥಿತರಿದ್ದರು.
Next Story





