ಅಡುಗೆ ಗ್ಯಾಸ್ ಸಂಪರ್ಕ ಇದ್ದವರಿಗೆ 1 ಲೀ. ಇಲ್ಲದವರಿಗೆ 3 ಲೀ. ಸೀಮೆಎಣ್ಣೆ: ಸಚಿವ ಖಾದರ್

ಮಂಗಳೂರು, ಫೆ.23: ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಅಡುಗೆ ಅನಿಲ ಸಂಪರ್ಕ ಇದ್ದವರಿಗೆ ತಿಂಗಳಿಗೆ 1 ಲೀಟರ್ ಸೀಮೆಎಣ್ಣೆ, ಇಲ್ಲದವರಿಗೆ 3 ಲೀ. ಸೀಮೆಎಣ್ಣೆ ವಿತರಿಸುವ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೀಮೆ ಎಣ್ಣೆ ಗ್ರಾಮೀಣ ಪ್ರದೇಶವಾಸಿಗಳ ಬಹುಕಾಲದ ಬೇಡಿಕೆಯಾಗಿದೆ. ಇದೀಗ ಸೀಮೆ ಎಣ್ಣೆ ಬೇಕಾದವರು ಸ್ಥಳೀಯ ಪಂಚಾಯತ್‌ಗೆ ಅರ್ಜಿ ನೀಡಬೇಕು ಎಂದವರು ತಿಳಿಸಿದರು.
ಪಡಿತರ ಚೀಟಿ ಕೂಪನ್ ವಿಚಾರ
ಇನ್ನು ಮುಂದೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಕೂಪನ್‌ಗಳನ್ನು ವಿತರಿಸಲಾಗುವುದು. ಮುಂದೆ ನ್ಯಾಯಬೆಲೆ ಅಂಗಡಿಯೇ ಆಹಾರ ಇಲಾಖೆಯ ಸೇವಾಕೇಂದ್ರವನ್ನಾಗಿ ಮಾಡಲಾಗುವುದು ಎಂದರು.
Next Story





