ಚೆನ್ನೈ: ರೈಲಿನಿಂದ ಬಿದ್ದು ಮೂವರು ಪ್ರಯಾಣಿಕರ ಸಾವು

ಚೆನ್ನೈ,ಫೆ.23: ಗುರುವಾರ ಬೆಳಗ್ಗೆ ಇಲ್ಲಿಯ ಉಪನಗರ ಚೆಂಗಲಪೇಟ್-ಬೀಚ್ ಮಾರ್ಗದಲ್ಲಿ ಚಲಿಸುತ್ತಿದ್ದ ಇಎಂಯು ರೈಲಿನ ಫುಟ್‌ಬೋರ್ಡ್‌ನಲ್ಲಿ ನಿಂತುಕೊಂಡು ಪ್ರಯಾಣಿಸುತ್ತಿದ್ದ ಮೂವರು ಪ್ರಯಾಣಿಕರು ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.
ಓರ್ವನ ಬ್ಯಾಗ್ ಹಳಿಯ ಪಕ್ಕದ ಸಿಗ್ನಲ್ ಕಂಬಕ್ಕೆ ಸಿಕ್ಕಿಹಾಕಿಕೊಂಡಾಗ ಸಮತೋಲನ ಕಳೆದುಕೊಂಡ ಮೂವರೂ ಹಳಿಯ ಮೇಲೆಯೇ ಬಿದ್ದಿದ್ದು, ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದರೆ ತೀವ್ರವಾಗಿ ಗಾಯಗೊಂಡಿದ್ದ ಇನ್ನೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದಿದ್ದಾನೆ.
ಘಟನೆಯಲ್ಲಿ ಇತರ ಇಬ್ಬರೂ ಗಾಯಗೊಂಡಿದ್ದು,ಆಸ್ಪತ್ರೆಗೆ ದಾಖಲಾಗಿದ್ದಾರೆ.
Next Story