ಮಣಿಪುರ:ಗುಂಡಿನ ಕಾಳಗದಲ್ಲಿ ಓರ್ವ ಉಗ್ರ,ನಾಗರಿಕ ಸಾವು

ಇಂಫಾಲ್,ಫೆ.23: ಮಣಿಪುರದ ತಾಮೆಂಗ್ಲಾಂಗ್ ಜಿಲ್ಲೆಯ ಖೋಪಮ್ ಚಿಂಗ್ಥಾಕ್ ಪ್ರದೇಶದಲ್ಲಿ ಗುರುವಾರ ಬೆಳಗಿನ ಜಾವ ಶಂಕಿತ ಬಂಡುಕೋರರು ಮತ್ತು ಸೇನಾ ಪಡೆಯ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಉಗ್ರ ಮತ್ತು ಓರ್ವ ನಾಗರಿಕ ಕೊಲ್ಲಲ್ಪಟ್ಟಿದ್ದಾರೆ.
ನಸುಕಿನ 3:30ರ ಸುಮಾರಿಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಸೇನೆಯ ಮೇಲೆ ಉಗ್ರರು ಗುಂಡು ಹಾರಿಸಿದಾಗ ಯೋಧರು ಪ್ರತಿದಾಳಿ ನಡೆಸಿದ್ದರು. ಮೃತ ನಾಗರಿಕನನ್ನು ಸ್ಥಳೀಯ ನಿವಾಸಿ ರೊಂಗ್ಮೀ(50)ಎಂದು ಗುರುತಿಸಲಾಗಿದೆ.
Next Story