ಬಿಎಂಸಿ ಚುನಾವಣೆ:ಶಿವಸೇನೆ ಏಕೈಕ ಅತಿದೊಡ್ಡ ಪಕ್ಷ

ಮುಂಬೈ,ಫೆ.23: ಬಿಜೆಪಿ ಮತ್ತು ಶಿವಸೇನೆ ತಮ್ಮ 25 ವರ್ಷಗಳ ಮೈತ್ರಿಯನ್ನು ಮುರಿದುಕೊಂಡು ಪ್ರತ್ಯೇಕವಾಗಿ ಕಣಕ್ಕಿಳಿದಿದ್ದ ಹಿನ್ನೆಲೆಯಲ್ಲಿ ಇಡೀ ರಾಷ್ಟ್ರದ ಗಮನ ಸೆಳೆದಿದ್ದ, ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಾಗಿರುವ ಬೃಹನ್ಮುಂಬೈ ಮಹಾನಗರ ಪಾಲಿಕೆಯ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟಗೊಂಡಿದೆ.
84 ಸ್ಥಾನಗಳನ್ನು ಬಾಚಿಕೊಂಡು ಏಕೈಕ ಅತಿ ದೊಡ್ಡ ಪಕ್ಷವಾಗಿ ಶಿವಸೇನೆ ಮೂಡಿಬಂದಿದೆ. ಆದರೆ ಕಳೆದ ಬಾರಿಯ ಚುನಾವಣೆಯಲ್ಲಿ ಕೇವಲ 31 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ತನ್ನ ಮತಗಳ ಬುನಾದಿಯನ್ನು ಸದೃಢಗೊಳಿಸಿಕೊಂಡಿದೆ. 81 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರೀ ಸಾಧನೆ ಪ್ರದರ್ಶಿಸಿದೆ. ಮಹಾನಗರ ಪಾಲಿಕೆಯಲ್ಲಿ ತ್ರಿಶಂಕು ಸ್ವರ್ಗ ಏರ್ಪಟ್ಟಿದ್ದು, ಯಾವುದೇ ಪಕ್ಷವೂ ಸ್ವತಂತ್ರವಾಗಿ ಅಧಿಕಾರಕ್ಕೇರುವ ಸ್ಥಿತಿಯಲ್ಲಿಲ್ಲ.
ಅಂತಿಮ ಬಲಾಬಲ ಹೀಗಿದೆ..
ಶಿವಸೇನೆ 84
ಬಿಜೆಪಿ 81
ಕಾಂಗ್ರೆಸ್ 31
ಇತರರು 14
ಎನ್‌ಸಿಪಿ 9
ಎಂಎನ್‌ಎಸ್ 7
Next Story