ಕೋರ್ಟು ಕೊಠಡಿಯಿಂದ ಪಲ್ಸರ್ ಸುನಿಯನ್ನುಬಂಧಿಸಿದ ಪೊಲೀಸರು

ಕೊಚ್ಚಿ,ಫೆ. 23: ಅತ್ಯಂತ ನಾಟಕೀಯವಾಗಿ ನಟಿಗೆ ಕಿರುಕುಳ ಕೊಟ್ಟ ಪ್ರಕರಣದ ಮುಖ್ಯ ಆರೋಪಿ ಪಲ್ಸರ್ ಸುನಿಯನ್ನು ಕೋರ್ಟಿನ ಕೊಠಡಿಯ ಹೊರಗೆ ಪೊಲೀಸರು ಬಂಧಿಸಿದ್ದಾರೆ. ಎರ್ನಾಕುಲಂ ಸಿಜೆಎಂ ಕೋರ್ಟಿಗೆ ಶರಣಾಗಲು ಬಂದಿದ್ದ ವೇಳೆ ನ್ಯಾಯಾಧೀಶರ ಚೇಂಬರ್‌ನ ಹತ್ತಿರದಿಂದ ಸುನಿಯನ್ನುಪೊಲೀಸರು ಬಂಧಿಸಿದರು. ಪೊಲೀಸ್ ನಾಡಿಡೀ ಹುಡುಕುತ್ತಿರುವಾಗ ಅವರ ಕಣ್ಣು ತಪ್ಪಿಸಿ ಎರ್ನಾಕುಲಂ ಸಿಜೆಎಂ ಕೋರ್ಟಿಗೆ ಮಧ್ಯಾಹ್ನ 1:10 ರ ಸಮಯದಲ್ಲಿ ಸುನಿ ಶರಣಾಗಲು ಬಂದಿದ್ದ. ಪ್ರಕರಣದ ಇನ್ನೊಬ್ಬ ಆರೊಪಿ ವಿಜೇಶ್‌ನನ್ನೂ ಸುನಿಯ ಜೊತೆ ಪೊಲೀಸರು ಬಂಧಿಸಿದ್ದಾರೆ.
ಮೂರುದಿವಸಗಳಿಂದ ಸುನಿ ಶರಣಾಗಲಿದ್ದಾನೆನ್ನು ವ ಸೂಚನೆ ಪೊಲೀಸರಿಗೆ ಸಿಕ್ಕಿತ್ತು. ಆಲಪ್ಪುಝದಲ್ಲಿ ಅಥವಾ ಎರ್ನಾಕುಲಂನಲ್ಲಿ ಆತ ಕೋರ್ಟಿಗೆ ಶರಣಾಗಲಿದ್ದಾನೆ ಎನ್ನುವುದನ್ನು ಮಫ್ತಿಯಲ್ಲಿದ್ದ ಪೊಲೀಸರು ಖಚಿತ ಪಡಿಸಿಕೊಂಡಿದ್ದರು. ಆದರೆ ಅವರೆಲ್ಲರ ಕಣ್ಣು ತಪ್ಪಿಸಿ ಪೊಲೀಸ್ ಠಾಣೆಗೆ ಕೂಗಳತೆ ದೂರದಲ್ಲಿರುವ ಸಿಜೆಎಂ ಕೋರ್ಟಿಗೆ ಬಂದು ಶರಣಾಗಲು ಪ್ರಯತ್ನಿಸಿದ್ದಾನೆ.
ಬಲಪ್ರಯೋಗಿಸಿದಾಗ ಇನ್ನೊಬ್ಬ ಆರೋಪಿ ವಿಜೇಶ್ ಪೊಲೀಸ್‌ರಿಗೆ ಸೆರೆಯಾಗದಿರಲು ಮಲಗಿ ಪ್ರತಿಭಟಿಸಲು ಯತ್ನಿಸಿದ್ದಾನೆ. ಆದರೆ ಹೆಚ್ಚಿನ ಪೊಲೀಸರು ಬಂದು ವಿಜೇಶ್ ಮತ್ತು ಸುನಿಯನ್ನು ಜೀಪಿಗೆ ಹಾಕಿಕೊಂಡು ಹೋಗಿದ್ದಾರೆ. ಕೋರ್ಟಿಗೆ ಪೊಲೀಸರು ಪ್ರವೇಶಿಸಿದ್ದನ್ನು ವಕೀಲರು ವಿರೋಧಿಸಿದ್ದಾರ.ಎ
ಸೆರೆಹಿಡಿಯುವಾಗ ಎಳೆದಾಟ ನಡೆದಿದೆ. ಬಲವಂತವಾಗಿ ಸುನಿಯನ್ನು ಪೊಲೀಸರು ಜೀಪಿಗೆ ಹತ್ತಿಸಿದ್ದಾರೆ. ಸಿಜೆಎಂ ಕೋರ್ಟಿನ ಎಲ್ಲ ಬಾಗಿಲುಗಳಲ್ಲಿಯೂ ಪೊಲೀಸರು ಕಾವಲಿದ್ದರು. ಕೋರ್ಟಿನ ಹಿಂಬದಿಯಿಂದ ಸುನಿ ಕೋರ್ಟಿಗೆ ಬಂದಿದ್ದ. ಬಹಳಷ್ಟು ಪೊಲೀಸರು ಸ್ಥಳದಲ್ಲಿದ್ದರು. ಕೋರ್ಟಿನೊಳಗೆ ಬರದಂತೆ ವಕೀಲರು ಪೊಲೀಸರನ್ನು ತಡೆದಿದ್ದಾರೆ. ಆದರೆ ಅವರನ್ನು ಸರಿಸಿ ಪೊಲೀಸರು ಸುನಿಯನ್ನು ಹಿಡಿದೆಳೆದು ಕೊಂಡು ಹೋಗಿದ್ದಾರೆ. ಆರೋಪಿ ಕಟಕಟೆಯಲ್ಲಿ ನಿಂತಲ್ಲಿಂದ ಪೊಲೀಸರು ಆರೋಪಿಯನ್ನುಎಳೆದು ಕೊಂಡು ಹೋದರು ಎನ್ನಲಾಗುತ್ತಿದೆ.
ಮಧ್ಯಾಹ್ನದ ಊಟದ ವಿರಾಮದ ಸಮಯದಲ್ಲಿ ಇದು ನಡೆದಿದೆ. ಮ್ಯಾಜಿಸ್ಟ್ರೇಟ್ ಚೇಂಬರ್‌ನಲ್ಲಿದ್ದರು ಎಂದು ವರದಿ ತಿಳಿಸಿದೆ.







