ಸುರತ್ಕಲ್: ಫೆ.24ರಂದು ಮುಹಿಯುದ್ದೀನ್ ಕೇಂದ್ರ ಜುಮಾ ಮಸೀದಿಯ ನೂತನ ನವೀಕೃತ ಮಸೀದಿ ಉದ್ಘಾಟನೆ

ಸುರತ್ಕಲ್, ಫೆ.23: ಇಲ್ಲಿನ ಮುಹಿಯುದ್ದೀನ್ ಕೇಂದ್ರ ಜುಮಾ ಮಸೀದಿಯ ನೂತನ ನವೀಕೃತ ಮಸೀದಿಯ ಉದ್ಘಾಟನೆ ಮತ್ತು ಸೌಹಾರ್ದ ಸಂಗಮ ಕಾರ್ಯಕ್ರಮವು ಮಸೀದಿಯ ವಠಾರದಲ್ಲಿ ಫೆ.24 ರಿಂದ 26ರ ವರೆಗೆ ನಡೆಯಲಿದೆ.
ಫೆ.24 ರಂದು ನಡೆಯಲಿರುವ ನವೀಕೃತ ಮಸೀದಿಯ ಉದ್ಘಾಟನೆಯನ್ನು ಅಸ್ಸೈಯದ್ ಇಬ್ರಾಹೀಂ ಖಲೀಲ್ ತಂಙಳ್ ಅಲ್ ಬುಖಾರಿ ಕಡಲುಂಡಿ ನೆರವೇರಿಸಲಿದ್ದು, ವಕ್ಫ್ ಕೈಕರ್ಯಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಅಲ್ ಅಝ್‌ಹರಿ ನಡೆಸಿಕೊಡಲಿದ್ದಾರೆ. ಉಡುಪಿ, ಹಾಸನ, ಚಿಕ್ಕಮಗಳುರು ಸಂಯುಕ್ತ ಖಾಝಿ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ ಖೂತುಬಾ ನಡೆಸಿಕೊಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಐ. ಯಾಕೂಬ್ ವಹಿಸಲಿದ್ದು, ಕೃಷ್ಣಾಪುರ ಖಾಝಿ ಇ.ಕೆ. ಇಬ್ರಾಹೀಂ ಮದನಿ, ಸುರತ್ಕಲ್ ಜುಮಾ ಮಸೀದಿಯ ಖತೀಬ್ ಬಿ.ವೈ. ಇಸ್ಮಾಯೀಲ್ ಸಅದಿ, ಬೊಳ್ಳೂರು ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಅಝ್‌ಹರ್ ಫೈಝಿ ಬೊಳ್ಳೂರು ಉಸ್ತಾದ್, ಈದ್ಗಾ ಜುಮಾ ಮಸೀದಿಯ ಖತೀಬ್ ಯಾಕುಬ್ ಮದನಿ, ಮಂಗಳುರು ಉತ್ತರ ವಲಯ ಶಾಸಕ ಮೊಯ್ದೀನ್ ಬಾವಾ, ನಿವೃತ್ತ ಡಿವೈಎಸ್ಪಿ ಟಿ.ಸಿ.ಎಂ. ಶರೀಫ್, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್‌ನ ಇಂಡಸ್ಟ್ರೀಸ್‌ನ ಅಧ್ಯಕ್ಷ ಎಸ್.ಎಂ ರಶೀದ್ ಹಾಜಿ, ಮುಹಿಯುದ್ದೀನ್ ಜುಮಾ ಮಸೀದಿಯ ಉಪಾಧ್ಯಕ್ಷ ಹಾಜಿ ಹಸನ್ ಬಾವಾ ಮೊದಲಾದವರು ಉಪಸ್ಥಿತರಿರುವರು.
ಫೆ. 25ರಂದು ಮಧ್ಯಾಹ್ನ ಮಕ್ಕಳ ಪ್ರತಿಭಾ ಕಾರಂಜಿ ಹಾಗೂ ಮಗ್ರಿಬ್ ನಮಾಝ್‌ನ ಬಳಿಕ ಬುರ್ದಾ ಮಜ್ಲಿಸ್ ಹಾಗೂ ಧಾರ್ಮಿಕ ಮತಪ್ರವಚನ ನಡೆಯಲಿದೆ. ಫೆ.26ರಂದು ಸಂಜೆ 4 ರಿಂದ ಸೌಹಾರ್ದ ಸಂಗಮ ಕಾರ್ಯಕ್ರಮ ನಡೆಯಲಿದೆ ಎಂದು ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಐ. ಯಾಕೂಬ್ ತಿಳಿಸಿದ್ದಾರೆ.







