ಮಂಗಳೂರು: ಕಿಂಗ್ಸ್ ಕೋಟ್ ಕಾಂಕ್ರಿಟ್ ರಸ್ತೆ ಉದ್ಘಾಟನೆ

ಮಂಗಳೂರು, ಫೆ.23: ಮನಪಾ ವ್ಯಾಪ್ತಿಯ 47ನೆ ಮಿಲಾಗ್ರಿಸ್ ವಾರ್ಡ್‌ನ ಕಾರ್ಪೋರೇಟರ್ ಅಬ್ದುರ್ರವೂಫ್‌ರ ಅನುದಾನದಲ್ಲಿ ನಿರ್ಮಿಸಲಾದ ಕಿಂಗ್ಸ್ ಕೋಟ್ ಕಾಂಕ್ರೀಟ್ ರಸ್ತೆಯನ್ನು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಉದ್ಘಾಟಿಸಿದರು.
ಈ ಸಂದರ್ಭ ರಸ್ತೆಗೆ 20 ಲಕ್ಷ ರೂ. ಅನುದಾನ ಒದಗಿಸಿದ ಕಾರ್ಪೋರೇಟರ್ ಅಬ್ದುರ್ರವೂಫ್‌ರನ್ನು ಸನ್ಮಾನಿಸಲಾಯಿತು.
ಶಾಸಕ ಮೊಯ್ದಿನ್ ಬಾವ, ಮೇಯರ್ ಹರಿನಾಥ್ ಕೆ., ಮನಪಾ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಲ್ಯಾನ್ಸಿ ಲಾಟ್ ಪಿಂಟೊ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಾಜಿ ಎಸ್.ಎಂ.ಆರ್. ರಶೀದ್ ಹಾಜಿ, ಎಐಸಿಸಿ ಸದಸ್ಯ ಪಿ.ವಿ. ಮೋಹನ್, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾಪ್ರಿಗುಡ್ಡೆ ಮಸೀದಿಯ ಖತೀಬ್ ಮುಹಮ್ಮದ್ ಮುಸ್ತ್ತಾಕ್ ಮದನಿ, ಹಾಜಿ ಪಿ.ಸಿ. ಹಾಶಿರ್, ನಿವೃತ್ತ ಡಿವೈಎಸ್ಪಿ ಟಿಸಿಎಂ ಶರೀಫ್, ರಾಮಚಂದ್ರ ಕರ್ಕೇರ, ಎಪಿಎಂಸಿ ಸದಸ್ಯ ಭರತೇಶ್ ಅಮೀನ್, ಅನಿಲ್, ಮೆರ್ವಿನ್ ಗೋಯಸ್, ಸಿ.ಎ. ರಹೀಂ, ಧರ್ಮಣ್ಣ ನಾಯಕ್, ಫರಾದ್, ಹುಸೈನ್ ಕುಂಞಿ, ಎಲಿಜಬೆತ್ ಪಿರೇರಾ, ಹಾಜಿ ಪುತ್ತುಬಾವು ಉಪಸ್ಥಿತರಿದ್ದರು.





