ಉಡುಪಿ: ಲಕ್ಷಾಂತರ ರೂ.ವಂಚನೆ
ಮಣಿಪಾಲ, ಫೆ.23: ಹೊರದೇಶದಲ್ಲಿ ಬಂಡವಾಳ ಹೂಡಿ ಅದರಲ್ಲಿ ಬಂದ ಲಾಭವನ್ನು ನೀಡುವುದಾಗಿ ನಂಬಿಸಿ ಮರೀನಾ ವಾಸ್, ರಾಜೇಶ್ ಜೀವನ್, ಸೋಫಿಯಾ ವಾಸ್ ಹಾಗೂ ನಿಕೋಲಸ್ ಎಂಬವರು ತಮ್ಮಿಂದ 40ಲಕ್ಷ ರೂ. ಹಣವನ್ನು ಪಡೆದು ಲಾಭವನ್ನು ನೀಡದೇ, ಹಣವನ್ನೂ ವಾಪಾಸು ಮಾಡದೇ ವಂಚಿಸಿರುವುದಾಗಿ 80 ಬಡಗುಬೆಟ್ಟು ಗ್ರಾಮದ ದಶರಥನಗರದ ಸ್ವರ್ಗ ನಿವಾಸದ ರೇಷ್ಮಾ ಹೆಗ್ಡೆ ಎಂಬವರು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಲ್ಲದೇ ಆರೋಪಿಗಳು ರೇಷ್ಮಾ ಹೆಗ್ಡೆಯವರ ಮನೆಯಿಂದ 60,000ರೂ. ವೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
Next Story





