ಭಿನ್ನ ಸಾಮರ್ಥ್ಯದ ಯುವತಿ ಒಡಿಸ್ಸಾದಲ್ಲಿ ಪಂಚಾಯತ್ ಸದಸ್ಯೆ !
ಭುವನೇಶ್ವರ್,ಫೆ. 24: ಒಡಿಸ್ಸಾದ ಸ್ಥಳೀಯಾಡಳಿತಕ್ಕೆ ನಡೆದ ಚುನಾವಣೆಯಲ್ಲಿ ಭಿನ್ನಸಾಮರ್ಥ್ಯದ ಅಭ್ಯಥಿ ಗೆದ್ದಿದ್ದಾರೆ. ಹುಟ್ಟಿನಿಂದಲೇ ಕಾಲಿನ ನಿಯಂತ್ರಣ ಕಳಕೊಂಡಿರುವ ಗಾಲಿಕುರ್ಚಿಯಲ್ಲಿ ಅಡ್ಡಾಡುವ ಮಿನಾತಿ ಬಾರಿಕ್ ಎನ್ನುವ ಯುವತಿ ಕೇಂದ್ರಪ್ಪಾರ ಜಿಲ್ಲೆಯ ಬಜಾಪುರ್ ಪಂಚಾಯತ್ ಸದಸ್ಯೆಯಾಗಿ ಚುನಾಯಿತರಾಗಿದ್ದಾರೆ.
ಒಡಿಸ್ಸಾದಲ್ಲಿ ಪಂಚಾಯತ್ ಚುನಾವಣೆಯಲ್ಲಿ ಗೆದ್ದಿರುವ ಎರಡನೆ ಭಿನ್ನಸಾಮರ್ಥ್ಯದ ಮಹಿಳೆ ಮಿನಾತಿ ಆಗಿದ್ದಾರೆ. 2007ರಲ್ಲಿ ಸುರೇಶ್ ಚೌಧರಿ ಪಂಚಾಯತ್ ಸರಪಂಚರಾಗಿ ಆಯ್ಕೆಯಾಗಿದ್ದರು. ಒಡಿಸ್ಸಾದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ರಾಜಕೀಯ ಹಿನ್ನೆಲೆಯಲ್ಲಿ ನಡೆಯುವುದಿಲ್ಲ ಎಂದು ವರದಿ ತಿಳಿಸಿದೆ.
Next Story