ಮಂಜೇಶ್ವರ: ರೈಲು ಡಿಕ್ಕಿ, ಬಾಲಕ ಮೃತ್ಯು.

ಮಂಜೇಶ್ವರ, ಫೆ.24: ಇಲ್ಲಿಗೆ ಸಮೀಪದ ಉದ್ಯಾವರ ಕುಂಡಡ್ಕ ಎಂಬಲ್ಲಿ ರೈಲೊಂದು ಡಿಕ್ಕಿ ಹೊಡೆದು 6ರ ಹರೆಯದ ಬಾಲಕನೋರ್ವ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತ ಬಾಲಕನನ್ನು ಉದ್ಯಾವರ ಫಸ್ಟ್ ಸಿಗ್ನಲ್ ಬಳಿ ವಾಸವಿರುವ ಇಸ್ಮಾಯಿಲ್ ಹಫ್ಸಾ ದಂಪತಿಗಳ ಪುತ್ರ ಅಬ್ದುಲ್ ರಹ್ಮಾನ್(6) ಎಂದು ಗುರುತಿಸಲಾಗಿದೆ.
ಮೃತ ಬಾಲಕ ಸಿರಾಜುಲ್ ಹುದಾ ಆಂಗ್ಲ ಮಾಧ್ಯಮ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.
ರೈಲು ಹಳಿ ದಾಟುತ್ತಿದ್ದ ವೇಳೆ ತಿರುವನಂತಪುರದಿಂದ ಮಂಗಳೂರು ಕಡೆ ಸಂಚರಿಸುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ.
ಮೃತದೇಹವನ್ನು ಮಂಗಲ್ಪಾಡಿ ಸಿ.ಎಚ್ಚ್.ಸಿ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ.
Next Story





