ಮಸೀದಿಗಳು ಸೌಹಾರ್ದದ ಪ್ರತಿಬಿಂಬಗಳು: ಕಡಲುಂಡಿ ತಂಙಳ್
ನೂತನ ನವೀಕೃತ ಸುರತ್ಕಲ್ ಕೇಂದ್ರ ಮುಹಿಯುದ್ದೀನ್ ಜುಮಾ ಮಸೀದಿ ಉದ್ಘಾಟನೆ

ಸುರತ್ಕಲ್, ಫೆ.24: ಮಸೀದಿಗಳು ಸ್ನೇಹ, ಸೌಹಾರ್ದ, ಕರುಣೆಯ ಪ್ರತಿಬಿಂಬಗಳಾಗಿದ್ದು, ಅವುಗಳ ನಿರ್ಮಾಣದಲ್ಲಿ ಪ್ರತಿಫಲಾಪೇಕ್ಷ ಬಯಸದೆ ಸಹಕರಿಸುವರಿಗೆ ಸ್ವರ್ಗದ ಮಾರ್ಗ ಸುಲಭವಾಗುವುದು ಎಂದು ಇಬ್ರಾಹೀಂ ಖಲೀಲ್ ತಂಙಳ್ ಅಲ್ ಬುಖಾರಿ ಕಡಲುಂಡಿ ಹೇಳಿದರು.
ಅವರು, ಸುರತ್ಕಲ್ ಕೇಂದ್ರ ಮುಹಿಯುದ್ದೀನ್ ಜುಮಾ ಮಸೀದಿಯ ನೂತನ ನವೀಕೃತ ಮಸೀದಿ ಉದ್ಘಾಟಿಸಿ, ವಕ್ಫ್ ಕೈಂಕರ್ಯ ನೇರವೇರಿಸಿ ಬಳಿಕ ಮಾತನಾಡಿದರು.
ದೇಶದ ಕೆಲವೇ ಶೇಕಡ ಮುಸ್ಲಿಮರು ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದು ಇನ್ನಷ್ಟು ಹೆಚ್ಚಾಗಬೇಕು. ಇದು ಶಿಕ್ಷಣದಿಂದ ಮಾತ್ರ ಸಾಧ್ಯ. ಇದಕ್ಕಾಗಿ ಸಮುದಾಯ ಶಿಕ್ಷಣಕ್ಕೆ ಅತೀ ಹೆಚ್ಚಿನ ಒತ್ತು ನೀಡಬೇಕು ಎಂದು ಅಭಿಪ್ರಾಯಿಸಿದರು.
ಸರಕಾರಿ, ಖಾಸಗಿ ಗ್ರಂಥಾಲಯಗಳನ್ನು ಕಾಣುತ್ತೇವೆ. ಅದೇ ರೀತಿ ಪ್ರತೀ ಮಸೀದಿ, ಮದರಸಗಳಲ್ಲಿ ಶೈಕ್ಷಣಿಕ, ಧಾರ್ಮಿಕ, ಉದ್ಯೋಗ ಮಾಹಿತಿಗಳನ್ನೊಳಗೊಂಡಂತಹ ಗ್ರಂಥಾಲಯಗಳನ್ನು ನಿರ್ಮಿಸಬೇಕು. ಗ್ರಂಥಾಲಯಗಳ ಮೂಲಕ ಸಮುದಾಯ ಲೌಕಿಕ ಹಾಗೂ ಧಾರ್ಮಿಕ ಜ್ಞಾನವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಮಸೀದಿಗಳು ಪ್ರಜಾಪ್ರಭುತ್ವ ದೇಶದಲ್ಲಿ ಕಲಹ, ಧ್ವೇಷಗಳನ್ನು ನೀಗಿಸಿ ಕೋಮು ಸೌಹಾರ್ದದೊಂದಿಗೆ ಸಮೃದ್ಧ ದೇಶ ನಿರ್ಮಾಣದ ಸಂಕೇತಗಳು ಎಂದ ಇಬ್ರಾಹೀಂ ಖಲೀಲ್ ತಂಙಳ್, ಇಸ್ಲಾಂ ಸರ್ವ ಧರ್ಮ, ಜನಾಂಗಗಳನ್ನು ಪ್ರೀತಿಸಲು ಆದೇಶಿಸಿದ ಧರ್ಮ ಎಂದು ಅಭಿಪ್ರಾಯಿಸಿದರು.
ಉಡುಪಿ , ಹಾಸನ ಮತ್ತು ಚಿಕ್ಕಮಗಳೂರು ಖಾಝಿ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಖುತುಬಾ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸುರತ್ಕಲ್ ಮುಹಿಯುದ್ದೀನ್ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಐ. ಯಾಕೂಬ್ ವಹಿಸಿದ್ದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಉತ್ತರ ವಲಯ ಶಾಸಕ ಮೊಯ್ದೀನ್ ಬಾವಾ, ಕೃಷ್ಣಾಪುರ ಖಾಝಿ ಇ.ಕೆ. ಇಬ್ರಾಹೀಂ ಮದನಿ, ಸುರತ್ಕಲ್ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಬಿ.ವೈ. ಇಸ್ಮಾಯೀಲ್ ಸಅದಿ, ಹಳೆಯಂಗಡಿ ಬೊಳ್ಳೂರು ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಅಝ್‌ಹರ್ ಫೈಝಿ ಬೊಳ್ಳೂರು ಉಸ್ತಾದ್, ಸುರತ್ಕಲ್ ಈದ್ಗಾ ಜುಮಾ ಮಸೀದಿಯ ಖತೀಬ್ ಯಾಕೂಬ್ ಮದನಿ, ಮಂಗಳೂರು ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಪ್ರಧಾಹನ ಕಾರ್ಯದರ್ಶಿ ಬಿ.ಎಂ. ಮಮ್ತಾಝ್ ಅಲಿ, ನವೃತ್ತ ಡಿವೈಎಸ್ಪಿ ಟಿ.ಸಿ.ಎಂ. ಶರೀಫ್, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಎಸ್. ಎಂ. ರಶೀದ್ ಹಾಜಿ, ರಾಜ್ಯ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಎಂ.ಎ. ಗಫೂರ್, ಪಿಡ್ಲೂಡಿ ಕಂಟ್ರಾಕ್ಟರ್ ಎಂ.ಜಿ. ಹುಸೈನ್, ಇಕ್ಬಾಲ್ ಅಹ್ಮದ್ ಶರೀಫ್ ಕನ್ಟ್ರಕ್ಷನ್, ಗುತ್ತಿಗೆ ದಾರ ನಿಸಾರ್ ಅಹ್ಮದ್, ಜಿ. ಮೊಯ್ದೀನ್, ಚೊಕ್ಕಬೆಟ್ಟು ಮುಜಾ ಮಸೀದಿಯ ಖತೀಭ್ ದಾರಿಮಿ ಅಬ್ದುಲ್ ಅಜೀಝ್, ಬಶೀರ್ ಹಾಜಿ ಡೆಕ್ಕನ್, ಮುಹಿಯುದ್ದೀನ್ ಜುಮಾ ಮಸೀದಿಯ ಉಪಾಧ್ಯಕ್ಷ ಹಾಜಿ ಎಸ್. ಹಸನ್ ಬಾವಾ, ನವೀಕರಣ ಸಮಿತಿ ಕಾರ್ಯದರ್ಶಿ ಎಸ್.ಕೆ. ಮುಸ್ತಫಾ, ಇಡ್ಯಾ ಖಿಲ್‌ರಿಯಾ ಮಸೀದಿಯ ಗೌರವಾಧ್ಯಕ್ಷ ಐ. ಬಾವುಂಙಾ, ಎಂ.ಜೆ.ಎಂ. ಸುರತ್ಕಲ್‌ನ ಮಾಜೀ ಉಪಾಧ್ಯಕ್ಷ ಹಾಜಿ ಐ. ಮೊಯ್ದಿನಬ್ಬ ಮತ್ತಿತರರು ಉಪಸ್ಥಿತರಿದ್ದರು.







