ಮಂಗಳೂರಿಗೆ ಹೋಗಿ ಬಂದ ಮೇಲೆ ಸಂಘಪರಿವಾರದ ಕುರಿತು ಪ್ರತಿಕ್ರಿಯಿಸುತ್ತೇನೆ: ಪಿಣರಾಯಿ ವಿಜಯನ್

ಕಲ್ಲಿಕೋಟೆ,ಫೆ. 24: ಮಂಗಳೂರಿನ ಸೌಹಾರ್ದ ರ‍್ಯಾಲಿಯಲ್ಲಿ ಭಾಗವಹಿಸಿ ಬಂದ ಬಳಿಕ ಸಂಘಪರಿವಾರದ ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸುತ್ತೇನೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗವಹಿಸಲಿದ್ದಾರೆ. ಸೌಹಾರ್ದ ರ‍್ಯಾಲಿ ಕಾರ್ಯಕ್ರಮದ ಬಳಿಕ ಆರೆಸ್ಸೆಸ್ ಪ್ರತಿಭಟನೆಯ ಕುರಿತು ಮಾತನಾಡುವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು ಎಂದು ಕೇರಳ ಮೂಲದ ವೆಬ್‌ಪೋರ್ಟಲೊಂದು ವರದಿ ಮಾಡಿದೆ.
ಪಿಣರಾಯಿ ಅವರಿಗೆ ಮಂಗಳೂರಿನಲ್ಲಿ ಕಾಲಿಡಲು ಬಿಡಲಾರೆವು ಎಂದು ಸಂಘಪರಿವಾರ ಸಂಘಟನೆಗಳು ಬೆದರಿಕೆ ಹಾಕಿವೆ. ನಾಳೆ(ಫೆ.25) ಮಂಗಳೂರಿನಲ್ಲಿ ಪಿಣರಾಯಿ ವಿಜಯನ್‌ರು ಭಾಗವಹಿಸುವ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ.
ಪಿಣರಾಯಿ ಅದರಲ್ಲಿ ಭಾಗವಹಿಸುವುದರ ವಿರುದ್ಧ ಶನಿವಾರ(ಫೆ.25) ಸಂಘಪರಿವಾರ ಸಂಘಟನೆಗಳು ಮಂಗಳೂರು ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಸಂಘಪರಿವಾರ ಹರತಾಳ ಘೋಷಿಸಿದೆ.
ಪಾಂಬಡಿ ನೆಹರೂ ಕಾಲೇಜಿನಲ್ಲಿ ಮೃತನಾದ ಜಿಷ್ಣು ಪ್ರಣೋಯ್ ಮನೆಗೆ ಭೇಟಿ ನೀಡುವೆ ಎಂದು ಮುಖ್ಯಮಂತ್ರಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಜಿಷ್ಣುವಿನ ಅಮ್ಮ ಮಹಿಜಾರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅವರ ಪ್ರತಿಕ್ರಿಯೆಯನ್ನು ಭಾವನಾತ್ಮಕವಾಗಿ ಮಾತ್ರ ನಾನು ಪರಿಗಣಿಸುವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಸಮಯ ಸಿಗದಿರುವ ಕಾರಣದಿಂದ ಜಿಷ್ಣುವಿನ ಮನೆ ಸಂದರ್ಶಿಸಲುತನ್ನಿಂದಾಗಿಲ್ಲ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆಂದು ವರದಿಯಾಗಿದೆ.







