ಎಂಜಿಆರ್-ಅಮ್ಮಾ-ದೀಪಾ ಪೋರಂ (ಎಂಎಡಿಪಿ)
ತಮಿಳುನಾಡಿನಲ್ಲಿ ಜಯಲಲಿತಾ ಸೊಸೆ ದೀಪಾರ ಹೊಸ ಪಕ್ಷ ಸ್ಥಾಪನೆ

ಚೆನ್ನೈ, ಫೆ.24: ಮಾಜಿ ಮುಖ್ಯ ಜಯಲಲಿತಾ ಸೊಸೆ ದೀಪಾ ಜಯಕುಮಾರ್ ಹೊಸ ಪಕ್ಷ 'ಎಂಜಿಆರ್-ಅಮ್ಮಾ-ದೀಪಾ ಪೋರಂ' (ಎಂಎಡಿಪಿ)ತಮಿಳುನಾಡಿನಲ್ಲಿ ರಾಜಕೀಯ ರಂಗಕ್ಕೆ ಇಂದು ಪ್ರವೇಶ ಮಾಡಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಹೊಸ ಪಕ್ಷದ ಹೆಸರು ಪ್ರಕಟಿಸಿದ ಜಯಲಲಿತಾ ಅಣ್ಣ ಜಯಕುಮಾರ್ ಪುತ್ರಿ ದೀಪಾ ಅವರು ತನ್ನ ಅತ್ತೆ ಜಯಲಲಿತಾ ಅವರ ನಿಧನದಿಂದ ತೆರವಾಗಿರುವ ಚೆನ್ನೈನ ಆರ್ ಕೆ ನಗರ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪ್ರಕಟಿಸಿದರು.
'ಎಂಎಡಿಪಿ 'ಅಮ್ಮಾ ಪಾರ್ಟಿಯೇ ಮುಂದೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದ ದೀಪಾ ಜಯಕುಮಾರ್ ಅವರು ಅಮ್ಮಾ ಗೋಸ್ಕರ ತಮಿಳುನಾಡಿನಲ್ಲಿ ತಾನು ಸೇವೆಗೆ ಸಿದ್ಧ ಎಂದು ಹೇಳಿದರು.
Next Story





