ಅಡ್ಯನಡ್ಕ : ಕಬಡ್ಡಿ ಪ್ರೀಮಿಯರ್ ಲೀಗ್ ಫೆಬ್ರವರಿ 25ಕ್ಕೆ

ಅಡ್ಯನಡ್ಕ , ಫೆ.24: ಫೆಬ್ರವರಿ 25 ರಂದು ಶನಿವಾರ ಸಂಜೆ 7:30ಕ್ಕೆ ಇಲೈಟ್ ಸ್ಪೋರ್ಟ್ಸ್ ಕ್ಲಬ್ ಅಡ್ಯನಡ್ಕ ಆಯೋಜಿಸಿರುವ 'ಕಬಡ್ಡಿ ಪ್ರೀಮಿಯರ್ ಲೀಗ್ ಸೀಸನ್ 3-2017' ಚಾವರ್ಕಾಡ್ ಅಡ್ಯನಡ್ಕದ ಇಲೈಟ್ ಕ್ರೀಡಾಂಗಣದಲ್ಲಿ ಉದ್ಘಾಟನೆಯಾಗಲಿದೆ.
ಎನ್ಮಕಜೆ ಪಂಚಾಯತ್ ಸದಸ್ಯ ಐತಪ್ಪ ಕುಲಾಲ್ ಪಂದ್ಯಾಟಕ್ಕೆ ಚಾಲನೆ ನೀಡುವರು. ಅಶೋಕ್.ಎ ಇರಾಮೂಲೆ ಅಧ್ಯಕ್ಷತೆ ವಹಿಸುವರು.
ಗ್ರಾಮ ಪಂಚಾಯತ್ ಸದಸ್ಯ ಕರೀಂ ಕುದ್ದುಪದವು, ಗಿರೀಶ ಮುಳಿಯ, ರಾಮಕೃಷ್ಣ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶರೀಫ್ ಇಲೈಟ್ , ಕಲಂದರ್ ಶಾಫಿ, ಸಿದ್ದೀಕ್.ಸಿ.ಎಂ ಉಪಸ್ತಿತರಿರುವರು.
ಪಂದ್ಯಾಟದಲ್ಲಿ ಅಡ್ಯನಡ್ಕ ರೋಯಲ್ಸ್, ಬೆಂಗಳೂರು ಬ್ಲಾಸ್ಟರ್ಸ್, ಶಾ ಕನ್ಸ್ಟ್ರಕ್ಷನ್‌ಸ್, ಬ್ರಿಗೇಡ್ ಬ್ರದರ್ಸ್, ಬ್ರಿಗೇಡ್ ಗಯ್ಸಿ, ಬ್ಲಾಕ್ ಕೇಟ್‌ಸ್ ಅಡ್ಯನಡ್ಕ, ಗೋಲ್ಡನ್ ಪಾಂತರ್ಸ್, ಲೆಡ್ವಿಯಾ ಫೈಟರ್ಸ್ ತಂಡ ಸೆಣಸಾಡಲಿದೆ.
Next Story





