ಝಕಾತ್ ಫೌಂಡೇಶನ್‌ನ 14, ಜಾಮಿಯಾ ಹಮ್‌ದಾರ್ದ್‌ನ 7 ವಿದ್ಯಾರ್ಥಿಗಳು ಯುಪಿಎಸ್‌ಸಿ ಉತ್ತೀರ್ಣ

ಹೊಸದಿಲ್ಲಿ, ಫೆ.24: ಕೇಂದ್ರ ಲೋಕ ಸೇವಾ ಆಯೋಗದ ಪ್ರಧಾನ (ಮೈನ್) ಪರೀಕ್ಷೆಗಳ ಫಲಿತಾಂಶಗಳು ಪ್ರಕಟಗೊಂಡಿದ್ದು, ಝಕಾತ್ ಇಂಡಿಯಾ ಫೌಂಡೇಶನ್‌ನ ಹಾಗೂ ಜಾಮಿಯಾ ಹಮ್‌ದರ್ದ್ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡಮಿಗೆ ಸೇರಿದ 20ಕ್ಕೂ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆೆ.
ಝಕಾತ್ ಇಂಡಿಯಾ ಫೌಂಡೇಶನ್ 14 ವಿದ್ಯಾರ್ಥಿಗಳು ಹಾಗೂ ಜಾಮಿಯಾ ಹರ್ದಾದ್‌ನ ಕನಿಷ್ಠ ಏಳು ಮಂದಿ ವಿದ್ಯಾರ್ಥಿಗಳು ಯುಪಿಎಸ್‌ಸಿ ಮೈನ್ಸ್‌ನಲ್ಲಿ ಉತ್ತೀರ್ಣಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಯುಪಿಎಸ್‌ಸಿ ಉತ್ತೀರ್ಣರಾದ ಜಾಮಿಯಾ ಹಮ್‌ದಾರ್ದ್ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡಮಿಯ ಏಳು ಮಂದಿ ವಿದ್ಯಾರ್ಥಿಗಳ ಪೈಕಿ ನಾಲ್ವರು ಮುಸ್ಲಿಮರು ಹಾಗೂ ಇನ್ನು ಮೂವರು ಇತರ ಅಲ್ಪಸಂಖ್ಯಾತ ಪಂಗಡಗಳಿಗೆ ಸೇರಿದರೆಂದು ಅಕಾಡಮಿಯ ನಿರ್ದೇಶಕ ಅಲಿ ತಿಳಿಸಿದ್ದಾರೆ.
ಮೈನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು 2017ರ ಮಾರ್ಚ್ 20ರಂದು ನಡೆಯಲಿರುವ ವ್ಯಕ್ತಿತ್ವ ಪರೀಕ್ಷೆಗೆ ಅರ್ಹರಾಗಲಿದ್ದಾರೆ. ಪರೀಕ್ಷೆಯ ದಿನಾಂಕ ಹಾಗೂ ಸಮಯವನ್ನು ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.
ಕಳೆದ ವರ್ಷ 39 ಮುಸ್ಲಿಮರು ಯುಪಿಎಸ್‌ಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಅವರ ಪೈಕಿ ಕಾಶ್ಮೀರದ ಅತರ್ ಅಮಿರಉಲ್ ಶಫಿ ಖಾನ್ ದ್ವಿತೀಯ ರ್ಯಾಂಕ್ ಪಡೆದಿದ್ದರು. 2015ರಲ್ಲಿ 38 ಮುಸ್ಲಿಮರು ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಿದ್ದರೆ, 2013ರಲ್ಲಿ 30 ಮಂದಿ ಹಾಗೂ 2014ರಲ್ಲಿ 34 ಮಂದಿ ತೇರ್ಗಡೆಯಾಗಿದ್ದರು.