ಉಡುಪಿ: ಐಕ್ಯತಾ ರ‍್ಯಾಲಿಗೆ ಮುಸ್ಲಿಮ್ ಒಕ್ಕೂಟ ಬೆಂಬಲ

ಉಡುಪಿ, ಫೆ.24: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸುವ ಐಕ್ಯತಾ ರ‍್ಯಾಲಿಗೆ ವಿರುದ್ಧವಾಗಿ ಹರತಾಳಕ್ಕೆ ಕರೆ ನೀಡಿರುವ ಸಂಘಪರಿವಾರದ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ, ಪ್ರಜಾಸತ್ತಾತ್ಮಕವಾಗಿ ನಡೆಯುವ ಐಕ್ಯತಾ ರ್ಯಾಲಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಪಿಣರಾಯಿ ಬರುವುದನ್ನು ವಿರೋಧಿಸಿ ಕಾನೂನು ಬಾಹಿರ ಬಂದ್ ಕರೆ ಹಾಗೂ ಇನ್ನಿತರ ದುಷ್ಕೃತ್ಯಗಳಲ್ಲಿ ತೊಡಗಿರುವ ಸಂಘಪರಿವಾರದ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಪೋಲಿಸ್ ಇಲಾಖೆ ಕಠಿಣ ಕಾನೂನು ಕ್ರಮ ತೆಗೆದು ಕೊಳ್ಳಬೇಕೆಂದು ಒಕ್ಕೂಟ ಆಗ್ರಹಿಸಿದೆ.
ಈ ದೇಶದಲ್ಲಿ ಯಾರು ಕೂಡ ಸಂವಿಧಾನ ಬದ್ದವಾಗಿ ಯಾವುದೇ ಸಭೆ ಸಮಾರಂಭ ಮಾಡುವ ಸಂಪೂರ್ಣ ಹಕ್ಕು ಹೊಂದಿರುತ್ತಾರೆ. ಆದ್ದರಿಂದ ಸಂವಿಧಾನ ಕೊಡಮಾಡಿರುವ ಅವಕಾಶಗಳನ್ನು ತಡೆಯುವ ಅಧಿಕಾರ ಯಾರಿಗೂ ಇಲ್ಲ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





