ಉಪ್ಪಿನಂಗಡಿ: ಸರ ಕಳ್ಳತನ; ಓರ್ವನ ಬಂಧನ
ಉಪ್ಪಿನಂಗಡಿ, ೆ.24: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದಲ್ಲಿ ಶಿವರಾತ್ರಿ ಮಖೆ ಜಾತ್ರೋತ್ಸವದ ಸಂದಭರ್ ಇಬ್ಬರು ಮಕ್ಕಳ ಸರಗಳ್ಳತನವಾಗಿದ್ದು, ಒಂದು ಪ್ರಕರಣಕ್ಕೆ ಸಂಬಂಸಿ ಸರಗಳ್ಳನನ್ನು ಹಿಡಿದ ಸಾರ್ವಜನಿಕರು ಆತನನ್ನು ಪೊಲೀಸರಿಗೊಪ್ಪಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ದೇವಾಲಯದಲ್ಲಿ ಊಟಮಾಡುತ್ತಿರುವಾಗ ಜಾರಿಗೆ ಬೈಲು ನಿವಾಸಿ ಅನಿತಾ ಎಂಬವರ ಮಗಳು ವರ್ಣಿತಾ ಎಂಬ ಮಗುವಿನ ಸುಮಾರು ಅರ್ಧ ಪವನ್ ತೂಕದ ಚಿನ್ನದ ಸರವನ್ನು ಸರಗಳ್ಳರು ಎಗರಿಸಿದ್ದಾರೆ ಎನ್ನಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಅಳಕೆ ಯೋಗೀಶ್ ಎಂಬವರ ಮಗುವಿನ ಸುಮಾರು ಒಂದೂವರೆ ಪವನ್ ತೂಕದ ಚಿನ್ನದ ಸರವನ್ನು ಸರಗಳ್ಳನೋರ್ವ ಎಳೆದು ಪರಾರಿಯಾಗಲು ಯತ್ನಿಸಿದನಾದರೂ, ಮಗು ಬೊಬ್ಬೆ ಹೊಡೆದು ಕಳವುಗೈದವನನ್ನು ತೋರಿಸಿದ ಪರಿಣಾಮ ಸಾರ್ವಜನಿಕರು ಕಳ್ಳನನ್ನು ಹಿಡಿದು ಪರಿಶೀಲನೆ ನಡೆಸಿ ಆತನ ಬಾಯೊಳಗೆ ಅಡಗಿಸಿಟ್ಟಿದ್ದ ಸರವನ್ನು ವಶಪಡಿಕೊಂಡು ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರಿಗೊಪ್ಪಿಸಿದ್ದಾರೆ.
ಕ್ಷೇತ್ರದಲ್ಲಿ ಜಮಾಯಿಸಿದ್ದ ಭಾರೀ ಭಕ್ತ ಜನಸಮೂಹದ ದುರ್ಲಾಭವನ್ನು ಪಡೆದು ಸರಗಳ್ಳತನ ನಡೆಸುವ ಖದೀಮರ ತಂಡ ಜಮಾಯಿಸಿದ್ದ ಹಿನ್ನೆಲೆಯಲ್ಲಿ ಭಕ್ತ ಜನತೆ ಭೀತಿಗೊಳಗಾಗಿದ್ದಾರೆನ್ನಲಾಗಿದೆ. ಭಕ್ತರು ಹಿಡಿದುಕೊಟ್ಟ ಸರಗಳ್ಳನನ್ನು ವಶಕ್ಕೆ ತೆಗೆದುಕೊಂಡಿರುವ ಉಪ್ಪಿನಂಗಡಿ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.





