ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶಿಲಾನ್ಯಾಸ

ಬಂಟ್ವಾಳ, ೆ.24: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಪ್ರದೇಶಾಭಿವೃದ್ಧಿ ನಿಯಲ್ಲಿ ಪುದು ಗ್ರಾಪಂ ವ್ಯಾಪ್ತಿಯ ಸುಜೀರು ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಿಂದ ಅರಸು ವೈದ್ಯನಾಥ ಮತ್ತು ಧೂಮಾವತಿ ಬಂಟ ದೈವಸ್ಥಾನದವರೆಗೆ ಸುಮಾರು 8 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಜಿಪಂ ಮಾಜಿ ಸದಸ್ಯ ಉಮರ್ ಾರೂಕ್ ಹಾಗೂ ಸ್ಥಳೀಯ ಮುಖಂಡ ಚಂದಪ್ಪಅಂಚನ್ ಶಿಲಾನ್ಯಾಸ ನೆರವೇರಿಸಿದರು. ವಾಹನ ಸಂಚಾರಕ್ಕೆ ಅಯೋಗ್ಯವಾದ ರಸ್ತೆಯನ್ನು ಡಾಮರೀಕರಣಗೊಳಿಸುವಂತೆ ಸ್ಥಳೀಯರು ಜಿಪಂ ಮಾಜಿ ಸದಸ್ಯ ಉಮರ್ ಾರೂಕ್ ನೇತೃತ್ವದಲ್ಲಿ ಸಚಿವ ಯು.ಟಿ. ಖಾದರ್‌ಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಸಚಿವ ಖಾದರ್ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಅನು ದಾನ ಬಿಡುಗಡೆ ಗೊಳಿಸಿದ್ದಲ್ಲದೆ ಮಾರ್ಚ್ ಎರಡನೆ ವಾರದಲ್ಲಿ ದೈವ ಸ್ಥಾನದಲ್ಲಿ ನಡೆಯ ಲಿರುವ ಜಾತ್ರೋತ್ಸವಕ್ಕೆ ಮುಂಚಿತವಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಶೀಘ್ರ ರಸ್ತೆ ಕಾಮಗಾರಿಗೆ ಸೂಚನೆ ನೀಡಿದ್ದಾರೆ. ಸ್ಥಳೀಯ ಪ್ರಮುಖ ಚಂದಪ್ಪ ಅಂಚನ್, ಪುದು ಗ್ರಾಪಂ ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ತಾಪಂ ಸದಸ್ಯೆ ಪದ್ಮಶ್ರೀ ದುರ್ಗೇಶ್ ಶೆಟ್ಟಿ, ಮಾಜಿ ಸದಸ್ಯ ಆಸ್ೀ ಇಕ್ಬಾಲ್, ಪಂಚಾಯತ್ ಸದಸ್ಯ ಅಖ್ತರ್ ಹುಸೈನ್, ರಮ್ಲಾನ್, ಝಾಹೀರ್ ಅಬ್ಬಾಸ್, ಲತ್ೀ, ಪ್ರಮುಖರಾದ ಎಂ.ಕೆ. ಮುಹಮ್ಮದ್, ಮಜೀದ್ ರಂಗಿಪೇಟೆ, ಕಿಶೋರ್ ಸುಜೀರು, ಸೌಕತ್ ಪಾಡಿ, ಇನ್ಶದ್ ಮಾರಿಪಳ್ಳ, ಝಾರ್ ಸುಜೀರು ಮತ್ತಿತರರು ಹಾಜರಿದ್ದರು.





