Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪೊಲೀಸ್ ಬೆಂಗಾವಲಿನೊಂದಿಗಿದ್ದ...

ಪೊಲೀಸ್ ಬೆಂಗಾವಲಿನೊಂದಿಗಿದ್ದ ವಿಚಾರಣಾಧೀನ ಕೈದಿಯ ಹತ್ಯೆ

ವಾರ್ತಾಭಾರತಿವಾರ್ತಾಭಾರತಿ25 Feb 2017 2:30 PM IST
share
ಪೊಲೀಸ್ ಬೆಂಗಾವಲಿನೊಂದಿಗಿದ್ದ ವಿಚಾರಣಾಧೀನ ಕೈದಿಯ ಹತ್ಯೆ

ಮದುರೈ,ಫೆ.25: ತನ್ನ ವಿರೋಧಿ ಗ್ಯಾಂಗಿನಿಂದ ಕೊಲೆಯಾಗಿರುವ ದಲಿತ ನಾಯಕ ಪಶುಪತಿ ಪಾಂಡ್ಯನ್ ನಿಕಟವರ್ತಿ ಸಿಂಗಾಂರಂ ಅಲಿಯಾಸ್ ಬಾಲಸುಬ್ರಮಣಿಯನ್ (48) ಎಂಬಾತನನ್ನು ನಿನ್ನೆ ಪೊಲೀಸ್ ಬೆಂಗಾವಲಿನಲ್ಲಿ ತಿರುನೆಲ್ವೆಲಿಯ ಪಾಳ್ಯಂಕೊಟ್ಟೈ ಕೇಂದ್ರ ಕಾರಾಗೃಹದಿಂದ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗಲೇ ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಹತ್ಯೆಗೈದಿದೆ.

    ಕೊಲೆಯಾಗಿರುವ ಬಾಲಸುಬ್ರಮಣಿಯನ್ ತೂತ್ತುಕುಡಿಯ ಅತ್ತೂರ ಬಳಿಯ ಪುಲ್ಲವೇಲಿ ನಿವಾಸಿಯಾಗಿದ್ದು, ಕೊಲೆ ಸೇರಿದಂತೆ ಒಂಭತ್ತು ಪ್ರಕರಣಗಳು ಆತನ ವಿರುದ್ಧ ದಾಖಲಾಗಿದ್ದವು. ತೂತ್ತುಕುಡಿ ಜೈಲಿನಲ್ಲಿದ್ದ ಆತನನ್ನು ಕಾಲುನೋವಿನ ಚಿಕತ್ಸೆಗಾಗಿ ಪಾಳ್ಯಂಕೊಟ್ಟೈ ಜೈಲಿಗೆ ಸ್ಥಳಾಂತರಗೊಳಿಸಲಾಗಿತ್ತು. ನಿನ್ನೆ ಬೆಳಿಗ್ಗೆ ಪ್ರಕರಣವೊಂದರ ವಿಚಾರಣೆಗಾಗಿ ಬಾಲಸುಬ್ರಮಣಿಯನ್‌ನನ್ನು ಪೊಲೀಸ್ ಜೀಪಿನಲ್ಲಿ ನ್ಯಾಯಾಲಯಕ್ಕೆ ಕರೆದೊಯ್ಯಲಾಗುತ್ತಿತ್ತು. ಜೀಪಿನಲ್ಲಿ ಚಾಲಕನ ಜೊತೆಗೆ ಮೂವರು ಪೊಲೀಸರು ಮತ್ತು ಎಸ್‌ಐ ವೀರಬಾಹು ಇದ್ದರು. ಸುಮಾರು ಎಂಟು ಕಿ.ಮೀ. ದೂರಕ್ಕೆ ಸಾಗುತ್ತಿದ್ದಂತೆ ಕೆಟಿಸಿ ನಗರ ಎಂಬಲ್ಲಿಯ ಚೆಕ್‌ಪೋಸ್ಟ್ ಬಳಿ ತಲುಪುತ್ತಿದ್ದಂತೆ ಕಾರುಗಳು ಮತ್ತು ಆಟೋರಿಕ್ಷಾಗಳಲ್ಲಿ ಕಾದು ಕುಳಿತಿದ್ದ 13 ಜನರ ಗುಂಪು ಪೊಲೀಸ್ ಜೀಪನ್ನು ತಡೆದು ನಿಲ್ಲಿಸಿತ್ತು. ಏನಾಗುತ್ತಿದೆ ಎನ್ನುವುದು ಪೊಲೀಸರಿಗೆ ಗೊತ್ತಾಗುವ ಮುನ್ನವೇ ಅವರ ಮೇಲೆ ಮೆಣಸಿನ ಪುಡಿ ಮಿಶ್ರಗೊಳಿಸಿದ್ದ ನೀರನ್ನು ಎರಚಿದ ದುಷ್ಕರ್ಮಿಗಳು ಬಾಲಸುಬ್ರಮಣಿಯನ್‌ನನ್ನು ಜೀಪಿನಿಂದ ಹೊರಗೆಳೆದು ಮಾರಕಾಸ್ತ್ರಗಳಿಂದ ಕೊಚ್ಚಿದ್ದಾರೆ. ತೀವ್ರಗಾಯಗಳಿಂದ ರಕ್ತದ ಮಡುವಲ್ಲಿ ಕುಸಿದು ಬಿದ್ದಾಗ ಅಲ್ಲಿಂಂಪರಾರಿಯಾಗಿದ್ದಾರೆ. ಬಾಲಸುಬ್ರಮಣಿಯನ್‌ನನ್ನು ತಕ್ಷಣ ತಿರುನೆಲ್ವೆಲಿಯ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿ ಯಾಗದೆ ಕೊನೆಯುಸಿರೆಳೆದಿದ್ದಾನೆ.

 ಈ ಹತ್ಯೆಯ ಹಿಂದೆ ತೂತ್ತುಕುಡಿಯ ಸುಭಾಷ ಪಣ್ಣೈಯರ್ ಮತ್ತು ಆತನ ಗ್ಯಾಂಗಿನ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕಳೆದ ಸುಮಾರು 25 ವರ್ಷಗಳಿಂದಲೂ ಪಶುಪತಿ ಪಾಂಡ್ಯನ್ ಮತ್ತು ಪಣ್ಣೈಯರ್ ಗ್ಯಾಂಗುಗಳ ಮಧ್ಯೆ ವೈಷಮ್ಯವಿದೆ. ಬಾಲಸುಬ್ರಮಣಿಯನ್ ತನ್ನ 20ರ ಹರೆಯದಿಂದಲೇ ಪಾಂಡ್ಯನ್ ಜೊತೆಯಲ್ಲಿದ್ದ. ಪಣ್ಣೈಯಾರ್‌ನ ತಂದೆ, ಅಜ್ಜ ಮತ್ತು ಸೋದರ ಸೇರಿದಂತೆ ಹಲವಾರು ಜನರು ಇವೆರಡೂ ಗ್ಯಾಂಗ್‌ಗಳ ನಡುವಿನ ಕಾಳಗಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಪಾಂಡ್ಯನ್‌ನ ಪತ್ನಿ, ಆತನ ಹಲವಾರು ನಿಕಟವರ್ತಿಗಳ ಜೊತೆಗೆ ಸ್ವತಃ ಪಾಂಡ್ಯನ್ ಕೂಡ ಗ್ಯಾಂಗ್ ವಾರ್‌ಗೆ ಬಲಿಯಾಗಿದ್ದಾನೆ.

ಬಾಲಸುಬ್ರಮಣಿಯನ್ ಮತ್ತು ಸಹಚರರು ಪಾಂಡ್ಯನ್ ಕೊಲೆಗೆ ಪ್ರತೀಕಾರವಾಗಿ ಪಣ್ಣೈಯಾರ್ ಹತ್ಯೆಗೆ ಅವಕಾಶಕ್ಕಾಗಿ ಕಾಯುತ್ತಿದ್ದರು. ಇದರ ವಾಸನೆ ಹೊಡೆದ ಪಣ್ಣೈಯಾರ್ ಬಾಲಸುಬ್ರಮಣಿಯನ್ ಕಥೆ ಮುಗಿಸಿದ್ದಾನೆ ಎನ್ನಲಾಗಿದೆ.

ಹಂತಕರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X