ಪೆಟ್ಟಿಗೆ ಪೆಟ್ಟು, ಕೊಲೆಗೆ ಕೊಲೆ ಪ್ರತಿಯಾಗಿ ನೀಡಿದ್ದೇವೆ: ಕೇರಳ ಬಿಜೆಪಿ ನಾಯಕ ಸುರೇಂದ್ರನ್

ಮಂಗಳೂರು,ಫೆ. 25: ಕೇರಳದಲ್ಲಿ ಪೆಟ್ಟಿಗೆ ಪೆಟ್ಟು, ಕೊಲೆಗೆಕೊಲೆ ಮರಳಿಸಿದ್ದೇವೆಂದು ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್ ಹೇಳಿದ್ದಾರೆ. ಅವರು ಮಂಗಳೂರಿನಲ್ಲಿ ಸಂಘಪರಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತಾಡುತ್ತಿದ್ದರು.
ಬಿಜೆಪಿ,ಆರೆಸ್ಸೆಸ್‌ಗೆ ಕೇರಳದಲ್ಲಿ ಬಲವಾದ ಪ್ರತಿ ಹೊಡೆತ ನೀಡುವ ಶಕ್ತಿಯಿಲ್ಲ ಎಂದಲ್ಲ. ಕಳೆದ ಚುನಾವಣೆಯಲ್ಲಿ 30ಲಕ್ಷ ವೋಟುಗಳು ನಮಗೆ ಸಿಕ್ಕಿವೆ. ಅದಕ್ಕಿಂತ ಮೊದಲಿನ ಚುನಾವಣೆಯಲ್ಲಿ ಐದು ಲಕ್ಷ ಓಟುಗಳು ಮಾತ್ರ ಸಿಕ್ಕಿತ್ತು. ಆಸಮಯದಲ್ಲಿ ಪ್ರತಿಯೊಂದು ಹೊಡೆತಕ್ಕೂ ಪ್ರತಿಹೊಡೆತವನ್ನು ನೀಡಿದ್ದೇವೆ. ಪ್ರತಿಯೊಂದು ಕೊಲೆಗೂ ಪ್ರತಿಕಾರ ತೀರಿಸಿದ್ದೇವೆ ಎಂದು ಸುರೇಂದ್ರನ್ ಹೇಳಿದರು. ಈಗ ಪೆಟ್ಟಿಗೆ ಪೆಟ್ಟು, ಕೊಲೆಗೆ ಕೊಲೆ ಎಂಬುದು ಇಲ್ಲ. ಆದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಹೇಳಿದರು ಎಂದು ವೆಬ್‌ಪೋರ್ಟಲೊಂದು ವರದಿಮಾಡಿದೆ.
Next Story





