ಮೂಡುಬಿದಿರೆ: ಮಾ.5ರಂದು ಕಾಮಧೇನು ಸಭಾಭವನ ಉದ್ಘಾಟನೆ

ಮೂಡುಬಿದಿರೆ, ಫೆ.25: ಇಲ್ಲಿನ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಹಾಗೂ ಇದರ ಕಟ್ಟಡ ನಿರ್ಮಾಣ ಸಮಿತಿ ಆಶ್ರಯದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಾಮಧೇನು ಸಮುದಾಯ ಸಭಾಭವನವು ಮಾರ್ಚ್ 5ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ, ಉದ್ಯಮಿ ನಾರಾಯಣ ಪಿ.ಎಂ. ತಿಳಿಸಿದ್ದಾರೆ.
ಅವರು ಶನಿವಾರ ಮೂಡುಬಿದಿರೆಯ ನಿಶ್ಮಿತಾ ಪ್ಯಾರಡೈಸ್ ಹಾಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಮಾರ್ಚ್ 5ರಂದು ಬೆಳಗ್ಗೆ 9ರಿಂದ ಮೂಡುಬಿದಿರೆ ವೆಂಕಟರಮಣ ದೇವಳದಿಂದ ಸ್ವರಾಜ್ಯ ಮೈದಾನದವರೆಗೆ ಭವ್ಯ ಶೋಭಾಯಾತ್ರೆ ನಡೆಯಲಿದ್ದು, ಮೂಡುಬಿದಿರೆಯ ಸಹಾಯಕ ಅರಣ್ಯ ಅಧಿಕಾರಿ ಎಚ್.ಆರ್. ಸುಬ್ರಹ್ಮಣ್ಯ ಇದಕ್ಕೆ ಚಾಲನೆ ನೀಡುವರು. 10 ಗಂಟೆಗೆ ನಾರಾಯಣ ಗುರುಗಳಿಗೆ ನವಕ ಕಲಶಾಭಿಷೇಕ ಹಾಗೂ ಗುರುಪೂಜೆ ನಡೆಯಲಿದೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕಾಮಧೇನು ಸಮುದಾಯ ಭವನವನ್ನು ಉದ್ಯಮಿ ಜಯರಾಮ್ ಬನಾನ್ ಉದ್ಘಾಟಿಸುವರು. ನವೀಕೃತ ನಾರಾಯಣ ಗುರು ಸಭಾಭವನದ ಉದ್ಘಾಟನೆಯನ್ನು ಉದ್ಯಮಿ ಗಂಗಾಧರ ಕೆ.ಅಮೀನ್, ಎಂ.ಶೀನಪ್ಪ, ಮಂಗಳ ಭವನವನ್ನು ಬಿಲ್ಲವ ಮಹಾಮಂಡಲದ ರಾಷ್ಟ್ರೀಯ ಅಧ್ಯಕ್ಷ ಜಯ ಸಿ. ಸುವರ್ಣ ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಬಿ. ಮನೋಹರ ನೆರವೇರಿಸುವರು. ಬಲ್ಯೊಟ್ಟು ಸೇವಾಶ್ರಮದ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಜಾನಪದ ವಿದ್ವಾಂಸ ಗಣೇಶ್ ಅಮೀನ್ ಸಂಕಮಾರ್ ಪ್ರಧಾನ ಭಾಷಣ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಭಯಚಂದ್ರ ಜೈನ್, ಉದ್ಯಮಿ ರಮೇಶ್ ಕುಮಾರ್, ಶಾಸಕ ವಿನಯಕುಮಾರ್ ಸೊರಕೆ, ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಉಮನಾಥ ಕೋಟ್ಯಾನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಉದ್ಯಮಿ ನಾರಾಯಣ ಪಿ.ಎಂ., ಪ್ರಭಾಕರ ಡಿ. ಸುವರ್ಣ ದುಬೈ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ ಕೋಟ್ಯಾನ್, ಮೂಡುಬಿದಿರೆ ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಭಾನುಮತಿ ಎಂ. ಶೀನಪ್ಪಭಾಗವಹಿಸಲಿದ್ದಾರೆ. ಸಂಘದ ಅಧ್ಯಕ್ಷ ಪೂವಪ್ಪ ಕುಂದರ್ ಅಧ್ಯಕ್ಷತೆ ವಹಿಸಲಿದ್ದಾರೆ. ನಾರಾಯಣ ಗುರು ಸೇವಾದಳದ ಅಧ್ಯಕ್ಷ ರಂಜಿತ್ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಗೋಪಿನಾಥ್ ಉಪಸ್ಥಿತರಿರುವರು.
ಕಾರ್ಯಕ್ರಮಗಳು: ಮಾರ್ಚ್ 4ರಂದು ರಾತ್ರಿ 7ರಿಂದ ಲೋಕೇಶ್ ಶಾಂತಿ ಕುದ್ರೋಳಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದೆ. ಮಾರ್ಚ್ 5ರಂದು ಬೆಳಗ್ಗೆ 7 ಗಂಟೆಗೆ ಗಣಹೋಮ, 8ರಿಂದ 9ರವರೆಗೆ ಉಪಹಾರ, 10 ಗಂಟೆಗೆ ಸಭಾ ಕಾರ್ಯಕ್ರಮ ಮಧ್ಯಾಹ್ನ 1 ಗಂಟೆಗೆ ಭೋಜನ, ಅಪರಾಹ್ನ 3ರಿಂದ 6ರ ತನಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳು ನಡೆಯಲಿದೆ. ಸಭಾಭವನದ ವೈಶಿಷ್ಟತೆ: 1200 ಆಸನಗಳ ಆಕರ್ಷಕ ಸಭಾಂಗಣ, ಭವ್ಯವಾದ ವೇದಿಕೆ, ಸುಸಜ್ಜಿತ ಭೋಜನ ಶಾಲೆ ಮತ್ತು ಪಾಕಶಾಲೆ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಕಾಮಧೇನು ಸಭಾಭವನ ಹೊಂದಿದೆ ಎಂದು ಅವರು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಪೂವಪ್ಪ ಕುಂದರ್, ನಾರಾಯಣ ಗುರು ಸೇವಾದಳದ ಅಧ್ಯಕ್ಷ ರಂಜಿತ್ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಗೋಪಿನಾಥ್, ರವೀಂದ್ರ ಎಂ. ಸುವರ್ಣ, ಪದ್ಮನಾಭ ಸಾಲ್ಯಾನ್, ವಾಸು ಪೂಜಾರಿ, ಲಕ್ಷ್ಮಣ ಪೂಜಾರಿ, ರೋಹನ್, ಸುರೇಶ್ ಪೂಜಾರಿ, ಜಗದೀಶ್ ಪೂಜಾರಿ, ರವಿಚಂದ್ರ ಕರ್ಕೇರ, ಗಿರೀಶ್ ಕುಮಾರ್, ಸುಶಾಂತ್ ಕರ್ಕೇರ, ನವೀನ್ ಕರ್ಕೇರ ಉಪಸ್ಥಿತರಿದ್ದರು







