ಇಡೀ ಕುಟುಂಬವನ್ನು ಬಲಿಪಡೆದ ಸಾಲ

ಕೊಚ್ಚೇರಿ,ಫೆ. 26: ಮಯುವಂಚೇರಿ ಮತ್ತನಂಗಾಡಿಯಲ್ಲಿ ಕುಟುಂಬವೊಂದರ ಐವರು ಸದಸ್ಯರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಯುವಂಚೇರಿಯ ಜೋನಿ ಜೋಸೆಫ್(49), ಪತ್ನಿ ಸೋಮ(35), ಮಕ್ಕಳಾದ ಅನ್ಸಾನ್ ಜೋನಿ(11), ಆಶ್ಲಿನ್ ಜೋನಿ(9), ಆನ್‌ಮೇರಿ(7) ತಮ್ಮ ಮನೆಯಲ್ಲಿ ಮೃತರಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆರ್ಥಿಕ ಸಂಕಷ್ಟವೇ ಇವರ ಸಾವಿಗೆ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ.
ಹಣ ಬಡ್ಡಿಗೆ ಕೊಡುವುದು ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಜೋನಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಅವರು ಭಾರೀ ಹಣಕಾಸು ಮುಗ್ಗಟ್ಟಿಗೆ ಈಡಾಗಿದ್ದರು. ನೋಟು ಅಮಾನ್ಯದಿಂದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಾದ ಸಮಸ್ಯೆ ಜೋನಿಯನ್ನು ಬಹಳವಾಗಿ ಬಾಧಿಸಿತ್ತು.
ಸಾಲಪಡೆದ ಹಣವನ್ನು ಸರಿಯಾದ ಸಮಯಕ್ಕೆ ಕೊಡಲು ಸಾಧ್ಯವಾಗದ್ದರಿಂದ ಅವರು ನೊಂದಿದ್ದರು. ಎಂಟು ಲಕ್ಷರೂಪಾಯಿ ಸಾಲವಿತ್ತು. ಪತ್ನಿಯ ಶೇರುಗಳನ್ನು ಮಾರಿ ಸಾಲ ತೀರಿಸಬಹುದೆಂದು ಅವರು ಭಾವಿಸಿದ್ದರು . ಆದರೆ ಅದು ಅವರಿಗೆ ಸಾಧ್ಯವಾಗಿರಲಿಲ್ಲ.
ಇದು ಪತ್ನಿಮತ್ತು ಮೂವರು ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಮಾಡಿಕೊಳ್ಳಲು ಜೋನಿಯನ್ನು ಪ್ರೇರೇಪಿಸಿರಬಹುದು ಎಂದು ಅಂದಾಜಿಸಲಾಗಿದೆ. ಜೋನಿ ಸ್ಟೇಶನರಿ ಅಂಗಡಿಯೊಂದನ್ನು ಹೊಂದಿದ್ದರು. ಶುಕ್ರವಾರ ರಾತ್ರಿ ದಾರುಣ ಘಟನೆ ನಡೆದಿದೆ.