ಗುಜರಾತ್‌ನಲ್ಲಿ ಶಂಕಿತ ಐಸಿಸ್ ಉಗ್ರರ ಸೆರೆ

ಹೊಸದಿಲ್ಲಿ,ಫೆ.26: ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ಭಯೋತ್ಪಾದನೆ ನಿಗ್ರಹ ಘಟಕ(ಎಟಿಎಸ್)ವು ಶನಿವಾರ ರಾತ್ರಿ ಬಂಧಿಸಿದೆ. ಆರೋಪಿಗಳು ಮುಂದಿನೆರಡು ದಿನಗಳಲ್ಲಿ ಗುಜರಾತಿನ ಛೋಟಿಲಾದಂತಹ ಕೆಲವು ಧಾರ್ಮಿಕ ಸ್ಥಳಗಳಲ್ಲಿ ಸರಣಿ ಸ್ಫೋಟಗಳನ್ನು ನಡೆಸಲು ಸಂಚು ಹೂಡಿದ್ದರು ಎಂದು ಎಟಿಎಸ್ ತಿಳಿಸಿದೆ.
ವಾಸಿಮ್ ರಮೋದಿಯಾ ಎಂಬಾತನನ್ನು ರಾಜಕೋಟ್‌ನಿಂದ ಮತ್ತು ಆತನ ಸೋದರ ನಯೀಂ ರಮೋದಿಯಾನನ್ನು ಭಾವನಗರದಿಂದ ಬಂಧಿಸಲಾಗಿದೆ. ಇವರಿಬ್ಬರೂ ಸಾಮಾಜಿಕ ಮಾಧ್ಯಮಗಳ ಮೂಲಕ ಐಸಿಸ್ ಜೊತೆ ಸಂಪರ್ಕದಲ್ಲಿದ್ದರು ಮತ್ತು ಅವರ ಬಳಿಯಿಂದ ಬಾಂಬ್ ತಯಾರಿಕೆ ಸಾಮಗ್ರಿಗಳನ್ನು ವಶಪಡಿಕೊಳ್ಳಲಾಗಿದೆ. ಈ ಇಬ್ಬರ ಬಂಧನದಿಂದ ಭಾರೀ ಭಯೋತ್ಪಾದಕ ದಾಳಿಯನ್ನು ತಪ್ಪಿಸಿದಂತಾಗಿದೆ ಎಂದು ಎಟಿಎಸ್‌ನ ಡಿಎಸ್‌ಪಿ ಕೆ.ಕೆ.ಪಟೇಲ್ ತಿಳಿಸಿದರು.
ಗನ್ ಪೌಡರ್, ಬ್ಯಾಟರಿಸಹಿತ ಸ್ಥಳೀಯ ನಿರ್ಮಿತ ಬಾಂಬ್‌ಗಳು, ಗುರುತು ಮರೆಮಾಚುವ ಮಾಸ್ಕ್‌ಗಳು, ಜೊತೆಗೆ ಆಕ್ಷೇಪಾರ್ಹ ಮತ್ತು ನಿಷೇಧಿತ ವಿಷಯ ಗಳನ್ನೊಳಗೊಂಡ ಕಂಪ್ಯೂಟರ್‌ಗಳನ್ನು ಬಂಧಿತರ ಬಳಿಯಿಂದ ವಶಪಡಿಕೊಳ್ಳಲಾಗಿದೆ ಎಂದರು.
Next Story