ಮಂಗಳೂರು: ಗೋ-ಸತ್ಯಾಗ್ರಹ ಕಾರ್ಯಕ್ರಮ

ಮಂಗಳೂರು, ಫೆ.26: ರಾಜ್ಯ ಗೋಶಾಲೆಗಳ ಒಕ್ಕೂಟವು ವಿವಿಧ ಸಂಘಟನೆಗಳ ಜತೆಗೂಡಿ ಗೋಹತ್ಯಾ ನಿಷೇಧ ಕಾಯ್ದೆ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಗರದ ನೆಹರೂ ಮೈದಾನದಲ್ಲಿ ರವಿವಾರ ಗೋ-ಸತ್ಯಾಗ್ರಹ ನಡೆಸಿತು.
ಕೊಂಡೆವೂರು ಮಠಾಧೀಶ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಗೋಪೂಜೆ ಮೂಲಕ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು. ಉತ್ತರ ಕಾಶಿ ಕಪಿಲಾಶ್ರಮದ ರಾಮಚಂದ್ರ ಗುರೂಜಿ ಮಾತನಾಡಿದರು.
ಬಜರಂಗ ದಳದ ಪ್ರಾಂತ ಸಂಚಾಲಕ ಶರಣ್ ಪಂಪುವೆಲ್ ಸಮಾರೋಪ ಭಾಷಣ ಮಾಡಿದರು. ಈ ಸಂದರ್ಭ ಜಗದೀಶ ಶೇಣವ, ಗೋಪಾಲ್ ಕುತ್ತಾರ್, ಭುಜಂಗ ಕುಲಾಲ್, ಉಮೇಶ್ ಮುಗೇರು, ಯೋಗೀಶ್ ಭಟ್, ಮೋನಪ್ಪ ಭಂಡಾರಿ, ಸತ್ಯಜಿತ್ ಸುರತ್ಕಲ್, ವೇದವ್ಯಾಸ ಕಾಮತ್, ಕಸ್ತೂರಿ ಪಂಜ, ಈಶ್ವರ ಕಟೀಲ್, ಶಿವಾನಂದ ಮೆಂಡನ್ ಪಾಲ್ಗೊಂಡಿದ್ದರು.
Next Story





