ಶಿಕ್ಷಣಕ್ಕೆ ಪ್ರಥಮ ಆಧ್ಯತೆ ನೀಡಿ: ಶಾಸಕ ವಸಂತ ಬಂಗೇರ

ಬೆಳ್ತಂಗಡಿ, ಫೆ.26: ಶಿಕ್ಷಣಕ್ಕೆ ಪ್ರಥಮ ಆಧ್ಯತೆಯನ್ನು ನೀಡಿ ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನಿಡುವುದಕ್ಕೆ ಮುಂದಾಗಬೇಕು ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಭಾನುವಾರ ಬೆಳ್ತಂಗಡಿ ಪಟ್ಟಣ ಪಂಚಾಯತ್ ವತಿಯಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಅರ್ಹ ಫಲಾನುಭಾವಿಗಳಿಗೆ ಹಾಗೂ ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿವೇತನ ವಿತರಣೆ ಮಾಡಿ ಮಾತನಾಡಿದರು.
ಪಟ್ಟಣ ಪಂಚಾಯತುನಿಂದ ವಿಧ್ಯಾರ್ಥಿಗಳಿಗೆ 5.8 ಲಕ್ಷ ವಿಧ್ಯಾರ್ಥಿವೇತನ ವಿತರಿಸಲಾಗುತ್ತಿದೆ ಹಾಗೂ ಅಂಗವಿಕಲರಿಗೆ 2.52 ಲಕ್ಷ ಸಹಾಯಧನ ವಿತರಿಸಲಾಗುತ್ತಿದೆ ಅದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತೆ ಕರೆನಿಡಿದರು.
ಪಟ್ಟಣ ಪಂಚಾಯತ್ ನ ಅಭಿವೃದ್ದಿಗಾಗಿ ಸರಕಾರದಿಂದ ಅನುಧಾನವನ್ನು ಒದಗಿಸಲಾಗಿದೆ ಬೆಳ್ತಂಗಡಿ ನದಿಗೆ ತಡೆಗೋಡೆಗಾಗಿ ರೂ 60 ಲಕ್ಷ ಮಂಜೂರಾಗಿದ್ದು ಕಿಂಡಿ ಅಣೆಕಟ್ಟಿಗಾಗಿ 85 ಲಕ್ಷ ಮಂಜೂರಾಗಿದೆ ಅಲ್ಲದೆ ಇತರೆ ಅಭಿವೃದ್ದಿಕಾರ್ಯಗಳಿಗಾಗಿ ಮೂರುಕೋಟಿ ವಿಶೇಷ ಅನುಧಾನವನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಧಿಗಳಾಗಿ ಆಗಮಿಸಿದ್ದ ಬೆಳ್ತಂಗಡಿ ತಹಶೀಲ್ದಾರ್ ತಿಪ್ಪೆಸ್ವಾಮಿ ಮಾತನಾಡಿ ಶುಭ ಹಾರೈಸಿದರು, ಪಟ್ಟನ ಪಂಚಾಯತಿನ ಅಧ್ಯಕ್ಷ ಮುಗುಳಿ ನಾರಾಯಣರಾವ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಪಟ್ಟಣ ಪಂಚಾಯತಿನ ಉಪಾಧ್ಯಕ್ಷ ಜಗದೀಶ್.ಡಿ, ಸ್ಥಾಯಿಸಮಿತಿ ಅಧ್ಯಕ್ಷ ಸಂತೋಷ್ಕುಮಾರ್ ಜೈನ್, ಮುಖ್ಯಾಧಿಕಾರಿ ಜೆಸ್ಸಿಂತಾ ಲೂಯಿಸ್, ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಣ್ಣಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಾಸಕ ಬಂಗೇರ ಅವರನ್ನು ಪಟ್ಟಣ ಪಂಚಾಯತಿನ ವತಿಯಿಂದ ಸನ್ಮಾನಿಸಲಾಯಿತು.
ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ 89 ಅಂಕ ಪಡೆದ ಪಟ್ಟಣ ಪಂಚಾಯತು ನಾಮನಿರ್ದೇಶಿತ ಸದಸ್ಯ ಜನಾರ್ಧನ ಬಂಗೇರ ಅವರ ಮಗಳು ಶರಣ್ಯ ಅವರನ್ನು ಸನ್ಮಾನಿಸಲಾಯಿತು.







