ರಾಮ್ದಾಸರ ನಟನೆ, ಕಾದಂಬರಿಗಳು ಅತ್ಯದ್ಬುತ: ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ

ಸುಬ್ರಾಯ ಚೊಕ್ಕಾಡಿ
ಉಡುಪಿ, ಫೆ.28: ಸಾಂಸ್ಕೃತಿಕ ಲೋಕಕ್ಕೆ ಉಡುಪಿ ಅಪಾರ ಕೊಡುಗೆ ನೀಡಿದ್ದು, ಅದರಲ್ಲಿ ಪ್ರೊ.ರಾಮ್ದಾಸರ ಪಾತ್ರ ಪ್ರಮುಖ. ಅವರ ನಟನೆ, ಕಾದಂಬರಿಗಳು ಅತ್ಯದ್ಬುತ ಎಂದು ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಹೇಳಿದರು.
ಉಡುಪಿ ಪ್ರೊ.ರಾಮದಾಸ್ ಅಭಿನಂದನ ಸಮಿತಿ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಕಲಾಮಂಟಪದಲ್ಲಿ ರವಿವಾರ ಆಯೋಜಿಸಲಾದ ಪ್ರೊ.ರಾಮದಾಸ್ ಅಭಿನಂದನೆ, ಬದುಕು ಬರಹದ ಅವಲೋಕನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದರು.
ಅಧ್ಯಕ್ಷತೆ ಹಿರಿಯ ರಂಗಕರ್ಮಿ ಪ್ರೊ.ಉದ್ಯಾವರ ಮಾಧವ ಆಚಾರ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಾಹಿತಿ ಪ್ರೊ.ರಾಮದಾಸ್, ಸಮಿತಿಯ ಅಧ್ಯಕ್ಷ ಡಾ.ಎಚ್.ಶಾಂತಾ ರಾಮ್, ಉಪಾಧ್ಯಕ್ಷ ಪ್ರೊ.ರಾಧಾಕೃಷ್ಣ ಆಚಾರ್ಯ ಉಪಸ್ಥಿತರಿದ್ದರು. ಮೀನಾಲಕ್ಷಣಿ ಅಡ್ಯಂತಾಯ ವಂದಿಸಿದರು.
Next Story





