ಮಂಗಳೂರು: ಅಂಗಡಿಗೆ ನುಗ್ಗಿ ಕಳವು

ಮಂಗಳೂರು, ಫೆ. 26: ಮೊಬೈಲ್ ಅಂಗಡಿಗೆ ನುಗ್ಗಿ ಸುಮಾರು 18,800 ಮೌಲ್ಯದ ಮೊಬೈಲ್ ಫೋನ್ ಸಹಿತ ನಗದು ಕಳವಾಗಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಫೆ. 25ರ ರಾತ್ರಿ 9 ಗಂಟೆಯಿಂದ ಫೆ.26ರಂದು ಬೆಳಗ್ಗೆ 8 ಗಂಟೆಯ ಮಧ್ಯೆ ಅಪರಿಚಿತ ಕಳ್ಳರು ಬಿಜೈ ಚರ್ಚಿನ ಎದುರುಗಡೆ ಇರುವ ನವೀನ್ ಎಂಬವರಿಗೆ ಸೇರಿದ ಸಾಯಿ ಕೂಲ್ ಪಾಯಿಂಟ್ ಎಂಬ ಮೊಬೈಲ್ ಶಾಪಿನ ಬಾಗಿಲಿನ ಕೀ ಮುರಿದು ಅಂಗಡಿಯೊಳಗಿದ್ದ ಮೊಬೈಲ್ ಫೋನ್ ಹಾಗೂ ನಗರದನ್ನು ದೋಚಿರುವುದಾಗಿ ದೂರು ನೀಡಲಾಗಿದೆ.
ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





